ಜೇನು ಸಾಕಣಿಕೆ: ನೋಂದಣಿಗೆ ಆಗಸ್ಟ್ 30 ಕೊನೆಯ ದಿನ

ಉಡುಪಿ : ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ರಾಷ್ಟ್ರೀಯ ಜೇನುನೊಣ ಸಾಕಣಿಕೆ ನಿಖರ ಮತ್ತು ಹನಿ ಮಿಷನ್ ಯೋಜನೆಯಡಿ ಮಧುಕ್ರಾಂತಿ ಪೋರ್ಟಲ್ ಎಂಬ ವೆಬ್ ಪೋರ್ಟಲ್‌ನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ.

ತಾಲೂಕಿನಲ್ಲಿ 10 ಕ್ಕಿಂತ ಹೆಚ್ಚು ಜೇನು ಪೆಟ್ಟಿಗೆಯನ್ನು ಹೊಂದಿರುವ ರೈತರು, ಜೇನು ಕೃಷಿಕರು, ಉದ್ದಿಮೆದಾರರು ಹಾಗೂ ಜೇನು ಉತ್ಪಾದನಾ ಸಂಘ ಸಂಸ್ಥೆಗಳು ವೆಬ್ ಪೋರ್ಟಲ್‌ನಲ್ಲಿ ತಮ್ಮ ವಿವರವನ್ನು ನೊಂದಾಯಿಸಿಕೊಳ್ಳಲು ಆಗಸ್ಟ್ 30 ಕೊನೆಯ ದಿನ.

ಮಧುಕ್ರಾಂತಿ ಪೋರ್ಟಲ್ ನೊಂದಣಿ ಶುಲ್ಕವನ್ನು 10 ರಿಂದ 100 ಜೇನು ಪೆಟ್ಟಿಗೆ ಹಾಗೂ ಕುಟುಂಬ ಹೊಂದಿರುವವರಿಗೆ 250 ರೂ. ನಿಗಧಿಪಡಿಸಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವAತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.