ಕುಂದಾಪುರ: ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದವರಿಗೆ ಕೊಡಮಾಡಿದ ೨೫ ಪಡಿತರ ಕಿಟ್ನ್ನು ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ಮಂಜುನಾಥ ಕುಂದರ್, ಬಸವ ಕುಂದರ್, ಮನೀಷ್ ಶಿರಿಯಾನ್, ಸತ್ಯ ತಿಂಗಳಾಯ, ನಾಗೇಶ್, ಪ್ರವೀಣ್, ಉದಯ ಕಾಂಚನ್, ಸಚಿನ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.