ಕಡಬ: ಬೆಡ್ ಶೀಟ್ ಮಾರಾಟಗಾರರಿಂದ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಯತ್ನ

ಕಡಬ: ಬೆಡ್ ಶೀಟ್ ಮಾರಾಟಗಾರರ ಸೋಗಿನಲ್ಲಿ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಮನೆಯಲ್ಲಿದ್ದ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ.

ರಫೀಕ್ ಹಾಗೂ ರಮೀಝುದ್ದೀನ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಬೆಡ್ ಶೀಟ್ ಮಾರಾಟ ಮಾಡಲು ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ಎಂಬಲ್ಲಿಗೆ ಬಂದಿದ್ದು, ಆ ಸಂದರ್ಭ ಆರೋಪಿಗಳು ಮಹಿಳೆಯ ಮೈಮೇಲೆ ಕೈ ಹಾಕಿ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸಂದಿಗ್ದ ಸನ್ನಿವೇಶದಲ್ಲಿ ಅಪಾಯವನ್ನರಿತು ಮಹಿಳೆಯು ಬೊಬ್ಬೆ ಹಾಕಿದ್ದು, ಇದರಿಂದ ಹೆದರಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಮಹಿಳೆಯು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆಯ ಆರೋಪದನ್ವಯ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.