BBK13: ಈ ಸಲ ಬೇಗನೇ ಶುರುವಾಗಲಿದೆ ‘ಬಿಗ್ ಬಾಸ್’ ಕನ್ನಡ: ಹೊಸ ಸೀಸನ್‌ನ ಪ್ರೋಮೊ ಔಟ್

ಬೆಂಗಳೂರು: ಕನ್ನಡ ಬಿಗ್ ಬಾಸ್ (Bigg Boss Kannada) ಹೊಸ ಸೀಸನ್ ಬಗ್ಗೆ ಬಿಗ್ ಅಪ್ಲೇಟ್ ಹೊರಬಿದ್ದಿದೆ.
ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಕನ್ನಡಿಗರ ಮೆಚ್ಚಿನ ಶೋ ಈ ಸಲ ಅಂದುಕೊಂಡ ದಿನಕ್ಕಿಂತ ಬೇಗನೇ ಆರಂಭಗೊಳ್ಳಲಿದೆ.
ಈ ಕುರಿತು ‘ಕಲರ್ಸ್ ಕನ್ನಡ’ ‘ಬಿಗ್ ಬಾಸ್ ಸೀಸನ್ 12’ (BBK13) ಮೊದಲ ಪ್ರೋಮೋವನ್ನು ರಿಲೀಸ್ ಮಾಡಿದೆ.
ಅನೇಕ ಜನರು ನಡೆದುಕೊಂಡು ಬರುತ್ತಿರುವ ಅನಿಮೇಷನ್ ಪ್ರೋಮೊವನ್ನು ರಿಲೀಸ್ ಮಾಡಲಾಗಿದೆ. ಪ್ರೋಮೊ ನೋಡಿದ್ರೆ ಈ ಸಲ ಸ್ಪರ್ಧಿಗಳ ವಿಚಾರದಲ್ಲಿ ಒಂದಷ್ಟು ಬದಲಾವಣೆ ಅಂದರೆ ಸೆಲೆಬ್ರಿಟಿ ಹೊರತುಪಡಿಸಿದರೆ ಸಾಮಾನ್ಯರಿಗೂ ಅವಕಾಶ ಇರಬಹುದಾ? ಎನ್ನುವ ಪ್ರಶ್ನೆಯನ್ನು ವೀಕ್ಷಕರಲ್ಲಿ ಹುಟ್ಟಿಸುತ್ತದೆ. ಕಳೆದ 12 ಸೀಸನ್‌ನಿಂದ ‘ಬಿಗ್ ಬಾಸ್’ ಕನ್ನಡಿಗರ ಮನ ಗೆಲುತ್ತಾ ಬರುತ್ತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿಗೆ ಆರಂಭವಾಗುತ್ತದೆ. ಆದರೆ ಈ ಸಲ ಬೇಗನೇ ಶುರುವಾಗಲಿದೆ.
‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ..’ ಎಂದು ಆಯೋಜಕರು ‘ಸೀಸನ್ 13’ ಪ್ರೋಮೊದಲ್ಲಿ ಹೇಳಿದ್ದಾರೆ. ಆ ಮೂಲಕ ‘ದೊಡ್ಡನೆ ಹಬ್ಬ’ಕ್ಕೆ ದಿನಗಣನೆ ಶುರುವಾಗಿದೆ. ಸ್ಪರ್ಧಿಗಳು ಯಾರೆಲ್ಲ ಇರುತ್ತಾರೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳ ಜತೆ ಯಾರು ವಿಶೇಷವಾಗಿ ಗಮನ ಸೆಳೆಯುವ ಸ್ಪರ್ಧಿ ಬರಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ. ಕಳೆದ ಸೀಸನ್‌ನಲ್ಲಿ ಗಿಲ್ಲಿನಟ ವಿನ್ನರ್ ಆಗಿದ್ದರು. ಗಿಲ್ಲಿ ದಾಖಲೆಯ ಮಟ್ಟದಲ್ಲಿ ವೋಟ್ ಪಡೆದು ಮಿಂಚಿದ್ದರು.