Bbk11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ಏಕಾಗ್ರತೆ ಕಳೆದುಕೊಂಡು, ನನ್ನಿಂದ ಆಗಲ್ಲವೆಂದು ಕಣ್ಣೀರು

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada-11) ಮನೆಯಲ್ಲಿ ದಿನ ಕಳೆದಂತೆ ರಾದ್ಧಾಂತಗಳು ಹೆಚ್ಚಾಗುತ್ತಿದೆ. ಕೊಟ್ಟಿರುವ ಟಾಸ್ಕ್‌ ವಿಚಾರದಲ್ಲೇ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದು ಬಿಗ್‌ ಬಾಸ್‌ ಗರಂ ಆಗಿದ್ದಾರೆ.

ರಜತ್‌ – ಚೈತ್ರಾ ನಡುವೆ ಟಾಸ್ಕ್‌ ಉಸ್ತುವಾರಿ ವಿಷಯಕ್ಕೆ ಮಾತಿನ ಚಕಮಕಿ ನಡೆದಿತ್ತು. ಮಾತಿನ ಭರದಲ್ಲೇ ಚೈತ್ರಾ ಅವರನ್ನು ರಜತ್‌ ತಳ್ಳಿದ್ದರು. ಕೆಲ ಸಮಯದ ಬಳಿಕ ರಜತ್‌ ತಾವು ಮಾಡಿದ್ದು ತಪ್ಪು ಎನ್ನುವುದನ್ನು ಮನದಟ್ಟು ಮಾಡಿಕೊಂಡು ಚೈತ್ರಾ ಅವರ ಬಳಿ ಕ್ಷಮೆಯಾಚಿಸಿದ್ದರು.

ಆದರೆ ಮತ್ತೊಂದು ಟಾಸ್ಕ್‌ನಲ್ಲಿ ಮತ್ತೊಮ್ಮೆ ಜಗಳ ಶುರುವಾಗಿದೆ. ಎರಡು ತಂಡಗಳು ಚಿತ್ರವಿರುವ ದಿಂಬನ್ನು ಹಿಡಿದುಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಚೌಕ್ಕಟ್ಟಿಗೆ ಬರಬೇಕು ಎನ್ನುವ ನಿಯಮವನ್ನು ಕೊಡಲಾಗಿದೆ. ಟಾಸ್ಕ್‌ ಉಸ್ತುವಾರಿಯನ್ನು ವಹಿಸಿಕೊಂಡಿರುವ ಚೈತ್ರಾ ಅವರು ದಿಂಬನ್ನು ಒಳಗಡೆಯಿಂದ ಇಸಿದುಕೊಂಡ್ರಿ ಎಂದಿದ್ದಾರೆ. ಅಣ್ಣಾ ನಿಮಗೆ ಇದು ಸರಿ ಕಾಣಿಸುತ್ತದೆ ಎಂದು ಹನುಮಂತು ಬಳಿ ಹೇಳಿದ್ದಾರೆ.

ಏನು ಮೋಸ ಗುರು ಇವರದ್ದು ಎಂದು ರಜತ್‌ ಅಸಮಾಧನಾ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಹನುಮಂತು ಅವರು ನಾನು ಗೆರೆ ದಾಟಿಲ್ಲ ಇಲ್ಲೇ ನಿಂತುಕೊಂಡಿದ್ದೇನೆ. ನನ್ನ ತಲೆ ಆಫ್‌ ಆದರೆ ನಾನು ಮೊದಲೇ ಸರಿಯಿಲ್ಲ. ಯಾರಾದ್ರೂ ಗಂಡು ಮಕ್ಕಳು ಆಗಿದ್ರೆ ಇತ್ತಾ ಎಂದು ಹನುಮಂತು ಗರಂ ಆಗಿದ್ದಾರೆ.

ನಾಚಿಕೆ ಆಗಲ್ವಾ ನಿಮಗೆ ಎಂದು ಧನರಾಜ್‌ ಏರು ಧ್ವನಿಯಲ್ಲಿ ಚೈತ್ರಾಗೆ ಪ್ರಶ್ನೆ ಮಾಡಿದ್ದಾರೆ. ಯಾರಿಗೆ ಹೇಳ್ತಾ ಇದ್ದೀಯಾ ನಾಚಿಕೆ ಆಗಲ್ಲ ಅಂಥ ಎಂದು ಆಕ್ರೋಶದ ನುಡಿಯಲ್ಲಿ ಚೈತ್ರಾ ಹೇಳಿದ್ದಾರೆ.

ಮನೆಯಲ್ಲಿನ ರಾದ್ಧಾಂತವನ್ನು ಗಮನಿಸಿದ ಬಿಗ್‌ ಬಾಸ್‌ ಈ ಟಾಸ್ಕ್‌ ರದ್ದು ಮಾಡಲಾಗಿದೆ. ಇದಕ್ಕೆ ಪರಿಣಾಮವಾಗಿ ತಕ್ಕ ಶಿಕ್ಷೆ ನೀಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕೂಲಿನ ಮೇಲೆ ಬಾಲ್‌ ಇಟ್ಟುಕೊಂಡು ಆಡುವ ಟಾಸ್ಕ್‌ನಲ್ಲಿ ಚೈತ್ರಾ ಅವರು ಸತತವಾಗಿ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಈ ಟಾಸ್ಕ್‌ನಲ್ಲಿ ಗೆದ್ದ ತಂಡ ನಾಮಿನೇಷನ್‌ ನಿಂದ ಪಾರು ಮಾಡುವ ಅಧಿಕಾರವನ್ನು ಪಡೆಯುತ್ತದೆ. ಆದರೆ ಚೈತ್ರಾ ಅವರು ಕೂಲಿನ ಮೇಲಿನ ಬಾಲ್‌ ಇನ್ನೊಬ್ಬರಿಗೆ ಪಾಸ್‌ ಮಾಡುವಾಗ ಎಡವಿದ್ದಾರೆ. ಆತುರಬೇಡ ಎಂದು ಸಹ ಸ್ಪರ್ಧಿಗಳು ಹೇಳಿದ್ದರು ಚೈತ್ರಾ ಅವರು ಆಟದಲ್ಲಿ ಏಕಗ್ರತೆಯನ್ನು ಕಳೆದುಕೊಂಡಿದ್ದಾರೆ.

ಐವತ್ತು ಚಾನ್ಸ್‌ ಆಯಿತು ಒಂದು ಬಾಲ್‌ ತಳ್ಳಿಲ್ಲವೆಂದು ತ್ರಿವಿಕ್ರಮ್‌ ಹೇಳಿದ್ದು, ಆಗ್ತಾ ಇಲ್ಲ ಕೂಲನ್ನು ತಲೆಗೆ ಬಡಿದುಕೊಂಡು ಎಂದು ಚೈತ್ರಾ ಕಣ್ಣೀರಿಟ್ಟಿದ್ದಾರೆ. ಯಾವತ್ತೂ ಕ್ಷಮಿಸಿಕೊಳ್ಳಲ್ಲವೆಂದು ಕಣ್ಣಿರು ಸುರಿಸಿದ್ದಾರೆ. ಚೈತ್ರಾ ಈ ಆಟ ನೋಡಿ ಉಳಿದ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.