ಬಂಟಕಲ್ಲು ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ನಲ್ಲಿ ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್ ಕಾರ್ಯಾಗಾರ 


ಬಂಟಕಲ್ಲು: ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ಹಾಗೂ ಡೆಲ್ಟಾ ಹೆಲ್ತ್ ಕೇರ್ ನ ಆಶ್ರಯದಲ್ಲಿ ಫೆಬ್ರವರಿ  22 ರಂದು ಬೇಸಿಕ್ ಲೈಫ್ ಸಪೋರ್ಟ್  ಹಾಗೂ ಏರ್ ವೇ ಮ್ಯಾನೇಜ್ ಮೇಂಟ್ ನ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್ ನ ಪ್ರಾಂಶುಪಾಲತಿರುಮಲೇಶ್ವರ ಭಟ್ ರವರು ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ, ಜೀವ ರಕ್ಷಣೆಯ ಬಗೆಗಿನ
ಕಾರ್ಯಾಗಾರಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. 

ಡಾ. ನವೀನ್ ಎಂ. ಬಲ್ಲಾಳ್ ಬೇಸಿಕ್ ಲೈಫ್ ಸಪೋರ್ಟ್ ನ ಪ್ರಾಮುಖ್ಯತೆಯ
ಬಗ್ಗೆ ವಿವರಿಸಿದರು.

ಡೆಲ್ಟಾ ಹೆಲ್ತ್ ಕೇರ್ ನ ಬೋಧಕರಾ ರಾಹುಲ್ ಬಿಸ್ಟ್ ಬೇಸಿಕ್ ಲೈಫ್
ಸಪೋರ್ಟ್ ಹಾಗೂ ಏರ್ ವೇ ಮ್ಯಾನೇಜ್ ಮೇಂಟ್ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸಿ. ಆರ್.ಭರತ್ ನಾರಾಯಣನ್ ಮೆಡಿಕಲ್ ಸಿಮ್ಯೂಲೇಟರ್ ನ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. 

ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್, ಉಡುಪಿ ಕಾಲೇಜ್ ಆಫ್ ನರ್ಸಿಂಗ್, ವಿದ್ಯಾ ಕಾಲೇಜ್ ಆಫ್
ನರ್ಸಿಂಗ್,  ಆದರ್ಶ ಇನ್ಸ್ಟಿಟ್ಯೂಟ್ ಆಫ಼್ ಅಲೈಡ್ ಹೆಲ್ತ್ ಸೈನ್ಸಸ್ , ವಿದ್ಯಾರತ್ನ ಇನ್ಸ್ಟಿಟ್ಯೂಟ್ ಆಫ಼್  ಹೆಲ್ತ್
ಸೈನ್ಸಸ್ ಹಾಗೂ ಎಸ್.ಎಂ.ವಿ.ಐ.ಟಿ.ಎಂ.ನ ಎಂ.ಬಿ.ಎ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ನಿರಾಮಯ ಕಾಲೇಜಿನ ಪ್ರಾಂಶುಪಾಲೆ ಡಾ. ಫ಼್ಲಾವಿಯ ಕ್ಯಾಸ್ಟಲೀನೊ ಸ್ವಾಗತಿಸಿ, ರೋಶನಿ ರೋಡ್ರಿಗಸ್
ಕಾರ್ಯಾಗಾರದ ಬಗ್ಗೆ ಅವಲೋಕಿಸಿದರು. ಶಿವಶಂಕರ್ ಪೈ ವಂದಿಸಿ, ಜೆನಿಫರ್ ಮಥಾಯಸ್
ನಿರೂಪಿಸಿದರು.