ಉಡುಪಿ: ಹೆಗ್ಗುಂಜೆಯಲ್ಲಿ ಆರಂಭಗೊಂಡ Kptcl 220/110/11 KV ಘಟಕದ ನಿರ್ಮಾಣದಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ಹೆಗ್ಗುಂಜೆಯ ನೀರ್ಜೆಡ್ಡಿನ ಕಿರಿಯ ಇಂಜಿನಿಯರ್ ಬಸವ ನಾಯ್ಕ್ ಅವರನ್ನು ಸ್ಥಳೀಯರು ಗೌರವಿಸಿದರು.
ಬಸವ ನಾಯ್ಕ್ ಕಳೆದ 15 ವರ್ಷಗಳಿಂದ ಪುಷ್ಪ ಎಲೆಕ್ಟ್ರಿಕಲ್ ಕುಂದಾಪುರದಲ್ಲಿ ದುಡಿಯುತ್ತಿದ್ದು, ಕುಕ್ಕೆಪಾಡಿ, ನೆಲ್ಯಾಡಿ, ಸವಣೂರು, ಗಂಗೊಳ್ಳಿ, ಸುಬ್ರಹ್ಮಣ್ಯ, ಕಾರ್ಕಳ, ಪರ್ಕಳ, ಹಿರಿಯಡಕ, ಕುಂದಾಪುರ ಹೀಗೆ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಗೂ ಟವರ್ ಲೈನ್ ಕಾಮಗಾರಿಯನ್ನು ಅತ್ಯಂತ ಯಶಸ್ವಿಗೊಳಿಸಿದ್ದಾರೆ.
ಇವರು ಈವರೆಗೆ ಯಾವುದೇ ಪ್ರಚಾರ ಇಲ್ಲದೆ ತಮಗೆ ಮಾಲೀಕರು ನೀಡಿದ ಕೆಲಸವನ್ನು ತುಂಬಾ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ.