ಮಂಗಳೂರು: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ನಿವಾಸಿಯಾದ ದೀಕ್ಷಿತಾ (18) ಎಂಬುವರು ಜೂನ್ 6ರಿಂದ ನಾಪತ್ತೆಯಾಗಿದ್ದಾರೆ.
ಈಕೆ 18 ವರ್ಷದ ಯುವತಿಯಾಗಿದ್ದು, ದುಂಡು ಮುಖ, ಗೋಧಿ ಬಣ್ಣ ಸಾಧಾರಣಾ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಚೂಡಿದಾರ್ ಟಾಪ್ ಧರಿಸಿದ್ದಾರೆ. ಕನ್ನಡ, ಮಲಯಾಳಂ, ತುಳು ಹಾಗೂ ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ.
ಈ ಚಹರೆಯುಳ್ಳ ಯುವತಿಯ ಪತ್ತೆಯಾದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿ ಅಥವಾ ಕೊಣಾಜೆ ಪೊಲೀಸ್ ಠಾಣೆ ದೂ. ಸಂಖ್ಯೆ: 0824-2220536, 9480802350 ಹಾಗೂ 0824-2220800 ಗೆ ಸಂಪರ್ಕಿಸಬಹುದು ಎಂದು ಕೊಣಾಜೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.