ಬಂಟ್ವಾಳ: ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಅಂದರ್!

ಬಂಟ್ವಾಳ: ದ್ವಿ ಚಕ್ರ ವಾಹನದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಬೋಳಂತೂರು ನಿವಾಸಿ ಮಹಮ್ಮದ್ ಮುಸ್ತಫಾ ಬಂಧಿತ ಆರೋಪಿ.

ಆರೋಪಿ ಮಹಮ್ಮದ್ ಮುಸ್ತಫಾ, ಸ್ನೇಹಿತನ ಜೊತೆಗೆ ಸೇರಿಕೊಂಡು ಅಕ್ರಮವಾಗಿ ದನಗಳನ್ನು ಕದ್ದು ತಂದು ಪ್ರತಿ ಆದಿತ್ಯವಾರದಂದು ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪೋಲೀಸರಿಗೆ ದೊರಕಿದೆ.

ಆರೋಪಿ ದ್ವಿ ಚಕ್ರದ ಮೂಲಕ ನಂದಾವರ, ಗೂಡಿನಬಳಿ, ಮಂಚಿ ಸಹಿತ ತಾಲೂಕಿನ ಆಯ್ದ ಕಡೆಗಳಿಗೆ ಮಾರಾಟ ಮಾಡುವುದಾಗಿ ಪೋಲೀಸರಿಗೆ ಮಾಹಿತಿ ದೊರಕಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.