ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಆಗಸ್ಟ್ 21 ರಿಂದ 23ರ ವರೆಗೆ ಶಿವಮೊಗ್ಗ ಜಿಲ್ಲೆಯ ನವಳೆಯ ಜವಾಹರಲಾಲ್ ನೆಹರು ನ್ಯೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ
ತಾಂತ್ರಿಕ ಸಮ್ಮೇಳನ ಯುಗ್ಮ ಟೆಕ್‌ಫೆಸ್ಟ್ 1.0 ನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿರುತ್ತಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದ ಈ ತಾಂತ್ರಿಕ ಉತ್ಸವವು, ಸೃಜನಶೀಲತೆ ಹಾಗೂ ತಾಂತ್ರಿಕತೆಯ ಪ್ರದರ್ಶನಕ್ಕೆ ಒತ್ತಾಸೆಯಾದ ವೇದಿಕೆಯಾಗಿದ್ದು, ಎಸ್. ಎಮ್. ವಿ. ಟಿ. ಎಮ್ ನ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಹಾಗೂ ತಂಡಗಳ ಸಾಮರ್ಥ್ಯದಿಂದ ಪೈಪೋಟಿಯ ಸ್ಪರ್ಧೆಯಲ್ಲಿ
ವಿಜೇತರಾಗಿದ್ದಾರೆ.
ವಿದ್ಯಾರ್ಥಿಗಳಾದ ಶಿವಂ, ಪೂರ್ಣನಂದ, ಶ್ರೇಯಾ ನಾಯ್ಕ್ ಮತ್ತು ಶಿವಾನಿ ಸಾಲಿಯಾನ್ ಗೆ ಹ್ಯಾಕ್ ಯುಗ್ಮ- 24 ಗಂಟೆಗಳ ಹ್ಯಾಕಥಾನ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, ಶಿವಂ ಮತ್ತು ಚೇತನ ಕೋಟ್ಯಾನ್‌ಗೆ ಡಿಸೈನ್ ಸ್ಪಿಟ್ ನಲ್ಲಿ ಪ್ರಥಮ ಸ್ಥಾನ,
ಅಮೃತ ಮತ್ತು ಶ್ರೇಯ ಎಸ್ ನಾಯ್ಕ್ಗೆ ಐಡಿಯಾಥಾನ್ ನಲ್ಲಿ ಎರಡನೇ ಸ್ಥಾನ ಹಾಗೂ ತೇಜಸ್ ನಾಯ್ಕ್ ಮತ್ತು ಸ್ವಸ್ತಿಕ್ ಯಶ್‌ಗೆ ಟ್ರೆಜರ್ ಹಂಟ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ರೀತಿಯ ಯಶಸ್ಸು ವಿದ್ಯಾರ್ಥಿಗಳ ನಿಷ್ಠೆ, ಶ್ರಮ ಹಾಗೂ ಶಿಕ್ಷಣದ ಗುಣಮಟ್ಟವನ್ನು
ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.












