ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಫೈನಲ್ ಪಿಚ್ ಡೇ ಸ್ಪರ್ಧೆಯಲ್ಲಿ ಬಹುಮಾನ

ಉಡುಪಿ,ಬಂಟಕಲ್: ಶ್ರೀ ಮಧ್ವ ವಾದಿರಾಜ
ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ ಮತ್ತು ಕೆನರಾ
ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಜಂಟಿಯಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ದಿನಾಂಕ 13 ಸೆಪ್ಟೆಂಬರ್ 2025 ರಂದು ಫೈನಲ್ ಫೀಚ್ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಾವು ಕಲ್ಪಿಸಿರುವ
ಸ್ಟಾರ್ಟ್ಅಪ್ ಕಲ್ಪನೆಗಳನ್ನು ರೂಪಿಸಿಕೊಳ್ಳಲು,
ವಿಸ್ತರಿಸಿಕೊಳ್ಳಲು ಹಾಗೂ ಅನುಭವೀ ಮಾರ್ಗದರ್ಶಕರ
ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ಒಂದು ಉತ್ತಮ
ವೇದಿಕೆಯಾಗಿತ್ತು. ಸ್ಪರ್ಧೆಯಲ್ಲಿ ಸಂಸ್ಥೆಯ 32 ವಿದ್ಯಾರ್ಥಿಗಳು ಮತ್ತು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಒಟ್ಟು
140 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂತಿಮಸುತ್ತಿನಲ್ಲಿ ಸಂಸ್ಥೆಯ(ಎಸ್ ಎಮ್‌ವಿಐಟಿಎಮ್) ಒಂದು ಸ್ಟಾರ್ಟ್ಅಪ್ ಕಲ್ಪನೆ ಮತ್ತು ಕೆನರಾ ಇಂಜಿನಿಯರಿಂಗ್ ಕಾಲೇಜಿನ 13 ಸ್ಟಾರ್ಟ್ಅಪ್ ಕಲ್ಪನೆಯ ತಂಡಗಳು ಭಾಗವಹಿಸಿದ್ದವು.

ಇದರಲ್ಲಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನೀರೀಕ್ಷಾ ಇವರು “ಬೆಸ್ಟ್ ಪಿಚ್ ಆಫ್ ದ ಡೇ” ಪ್ರಶಸ್ತಿಯನ್ನು
ಪಡೆದಿರುತ್ತಾರೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,
ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ
ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ರೀತಿಯ
ಯಶಸ್ಸು ವಿದ್ಯಾರ್ಥಿನಿ ನಿಷ್ಠೆ, ಶ್ರಮ ಹಾಗೂ ಶಿಕ್ಷಣದ
ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.