ಉಡುಪಿ,ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಶಾಖೆಗೆ ಪ್ರತಿಷ್ಠಿತ ಐದು ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ದಿನಾಂಕ 18 ಜನವರಿ 2026ರ ರಂದು ಬೆಂಗಳೂರಿನಲ್ಲಿ ನಡೆದ ಐಇಇಇ ಬೆಂಗಳೂರು ಸೆಕ್ಷನ್‌ನ ವಾರ್ಷಿಕ ಸಭೆಯಲ್ಲಿ ನೀಡಲಾಯಿತು.
ಐಇಇಇ ವಿದ್ಯಾರ್ಥಿ ಶಾಖೆಯು ಪಡೆದುಕೊಂಡ ಪ್ರಶಸ್ತಿಗಳು “ಔಟ್ ಸ್ಟ್ಯಾಂಡಿಂಗ್ ಲಾರ್ಜ್ ಸ್ಟುಡೆಂಟ್ ಬ್ರಾಂಚ್ ಅವಾರ್ಡ್”, ಬೆಂಗಳೂರು ಸೆಕ್ಷನ್‌ನ “ಟಾಪ್ 25 ವಿದ್ಯಾರ್ಥಿ ಶಾಖೆಗಳ ಪಟ್ಟಿಯಲ್ಲಿ ಸ್ಥಾನ”, “ಮೆಂಬರ್ ಶಿಪ್ ಡೆವಲಪ್‌ಮೆಂಟ್ ಚಾಲೆಂಜ್ ಅವಾರ್ಡ್”, “ಔಟ್ ಸ್ಟ್ಯಾಂಡಿಂಗ್ ಸ್ಟುಡೆಂಟ್ ವಾಲಂಟಿಯರ್ ಅವಾರ್ಡ್” ದೊರೆತಿದೆ.
ಒಂದೇ ವರ್ಷದಲ್ಲಿ ಐದು ಪ್ರಶಸ್ತಿಗಳನ್ನು ಪಡೆದ ಐಇಇಇ ಬೆಂಗಳೂರು ಸೆಕ್ಷನ್‌ನ ಏಕೈಕ ಸಂಸ್ಥೆಯಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಗುರುತಿಸಿ ಕೊಂಡಿದೆ. ಇದು ಸಂಸ್ಥೆಯ ಶ್ರೇಷ್ಠ ಕಾರ್ಯಕ್ಷಮತೆಯ ಪ್ರತೀಕವಾಗಿದೆ.ಸಂಸ್ಥೆ ಈ ಸಾಧನೆಗೆ ಐಇಇಇ ಬೆಂಗಳೂರು ಸೆಕ್ಷನ್ ಹಾಗೂ ಮಂಗಳೂರು ಉಪ-ಸೆಕ್ಷನ್‌ಗಳ ನಿರಂತರ ಮಾರ್ಗದರ್ಶನ, ಪ್ರೋತ್ಸಾಹವು ಕಾರಣವಾಗಿದೆ.
















