ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶ್ರೀಯುತ ಅಶ್ವಿನ್ ಶೆಟ್ಟಿ ಇವರು ಸಂಸ್ಥೆಯ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಮತ್ತು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಸತ್ಯಶಂಕರ
ಶರ್ಮಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಫೆಕ್ಟ್ ಆಫ್ ಟ್ರೀಸ್ ಎಲಿಮೆಂಟ್ ಮೆಗ್ನೀಶಿಯಂ ಆನ್ ದ ಮೆಕ್ಯಾನಿಕಲ್ ಆ್ಯಂಡ್ ವೇರ್ ಬಿಹೇವಿಯರ್ ಆಫ್ ಸಿಲಿಕಾನ್ ಕಾರ್ಬೈಡ್ ರೀಯಿನ್‌ಪೋರ್ಸ್ಡ್ ಅಲ್ಯೂಮಿನಿಯಂ-ಸಿಲಿಕಾನ್ ಯುಟಿಕ್ಟಿಕ್ ಮೆಟಲ್ ಮ್ಯಾಟ್ರಿಕ್ಸ್ ಕಾಂಪೋಸಿಟ್” ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದಿನಾಂಕ 04 ಜುಲೈ 2025 ರಂದು ಬೆಳಗಾವಿಯಲ್ಲಿ ನಡೆದ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 25ನೇ ವಾರ್ಷಿಕ
ಘಟಿಕೋತ್ಸವದಲ್ಲಿ ಶ್ರೀ ಅಶ್ವಿನ್ ಶೆಟ್ಟಿಯವರಿಗೆ ಮೆಕ್ಯಾನಿಕಲ್
ಇಂಜಿನಿಯರಿಂಗ್ ಸೈನ್ಸಸ್ ನಲ್ಲಿ ಪಿಎಚ್ ಡಿ ಪದವಿ ಪ್ರಧಾನ ಮಾಡಲಾಯಿತು.
ಶ್ರೀ ಅಶ್ವಿನ್ ಶೆಟ್ಟಿಯವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.












