ಉಡುಪಿ: ಉಡುಪಿ ಬನ್ನಂಜೆ ಗರಡಿ ರಸ್ತೆ ಹತ್ತಿರ ಬನ್ನಂಜೆ ಶ್ರೀ ಶನಿಕ್ಷೇತ್ರ ಶ್ರೀ ಶನಿದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹ ಸನ್ನಿಧಾನದಲ್ಲಿ ಮೇ19 ಶುಕ್ರವಾರದಂದು ಶ್ರೀ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಮಾರ್ಗದರ್ಶನದಲ್ಲಿ ಕೊರಂಗ್ರಪಾಡಿ ಶ್ರೀ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ಚರ ಉತ್ಸವ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ಬೆಳಿಗ್ಗೆ 5.30ಕ್ಕೆ ಉಷಾಕಾಲ ಪೂಜೆ, 7:30 ರಿಂದ ಸಗ್ರಹಮುಖ ಶನಿಶಾಂತಿ ಪುರಸ್ಸರ ಜಯ ಸೂಕ್ತ ಯಾಗ 11.30ಕ್ಕೆ ಪೂರ್ಣಾಹುತಿ, ಶನೈಶ್ಚರ ಉತ್ಸವ, ಪ್ರಸಾದ ವಿತರಣೆ, 12.30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ 5:30ಕ್ಕೆ ಮಂಡಲ ಪೂಜೆ ಪ್ರಾರಂಭ, ನಂತರ ರಂಗಪೂಜೆ 6.30ಕ್ಕೆ ಉತ್ಸವ ಬಲಿ, ಶನೈಶ್ಚರ ಜಯಂತಿ ಪ್ರಯುಕ್ತ ಜನ್ಮಾಘ್ಯ ಪ್ರದಾನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಸಂಜೆ 4:30ಕ್ಕೆ – ಚಿ|ಪ್ರತೀಕ್ ಆಚಾರ್ಯ ಅವರಿಂದ ‘ವೇಣುವಾದನ’ ರಾತ್ರಿ 7:30ಕ್ಕೆ ಮ್ಯಾಜಿಸಿಯನ್ ಶ್ರೀಪಾದ ಆಚಾರ್ಯ, ಪೂಜಾ ಆಚಾರ್ಯ ಮತ್ತು ಪ್ರತೀಕ್ ಆಚಾರ್ಯ ತಂಡದವರಿಂದ ಮ್ಯಾಜಿಕ್ ಶೋ, ಶ್ಯಾಡೋ ಪ್ಲೇ, ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಯಲಿದೆ.
ತಮಗೆಲ್ಲರಿಗೂ ಆದರದ ಸ್ವಾಗತ
ಶ್ರೀ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಸ್ವಾಮೀಜಿ ಸಂಸ್ಥಾಪಕರು, ಬನ್ನಂಜೆ ಶ್ರೀ ಶನಿಕ್ಷೇತ್ರ ಬನ್ನಂಜೆ ಮಠ, ಉಡುಪಿ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬನ್ನಂಜೆ ಶ್ರೀ ಶನಿಕ್ಷೇತ್ರ ಟ್ರಸ್ಟ್ (ರಿ.) ಹಾಗೂ ಅರ್ಚಕ ವೃಂದ ಮತ್ತು ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.