ಬ್ಯಾಂಕ್ ಆಫ್ ಬರೋಡಾ 115 ನೇ ಸ್ಥಾಪನಾ ದಿನಾಚರಣೆ

ಉಡುಪಿ: ಬ್ಯಾಂಕ್ ಅಪ್ ಬರೋಡ ಅತ್ರಾಡಿ ಶಾಖೆಯಲ್ಲಿ ಬ್ಯಾಂಕಿನ 115 ನೇ ಸ್ಥಾಪನಾ ದಿನಾಚರಣೆಯನ್ನು ಬ್ಯಾಂಕಿನ ಹಿರಿಯ ಗ್ರಾಹಕ ಸತ್ಯಾನಂದ ನಾಯಕ್ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಬ್ಯಾಂಕಿನ ಸ್ಥಾಪಕರಾದ ಮಹಾರಾಜ್ ಸಯಾಜಿ ರಾವ್ ಗಾಯಕ್ವಡ್ ರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದರು.

ನಂತರ ಮಾತನಾಡುತ್ತಾ, 1973 ರಲ್ಲಿ ಅತ್ರಾಡಿಯಲ್ಲಿ ವಿಜಯ ಬ್ಯಾಂಕ್ ಶಾಖೆ ಉದ್ಘಾಟನೆ ಅದ ಸಂದರ್ಭದ ದಿನಗಳು, 1969 ರಲ್ಲಿ ಬ್ಯಾಂಕ್ ರಾಷ್ಟೀಕರಣ, 2020 ರಲ್ಲಿ ಬ್ಯಾಂಕ್ ಆಫ್ ಬರೋಡದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಗಳು ವಿಲೀನಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿ ಇಲ್ಲಿನ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದರು ಹಾಗೂ ವಿಜಯ ಬ್ಯಾಂಕ್ ನ ಬೆಳವಣಿಗೆಗೆ ಮೂಲ್ಕಿ ಸುಂದರಾಂ ಶೆಟ್ಟಿಯವರ ಕೊಡುಗೆಯನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ಶಾಖಾಧಿಕಾರಿ ಅಶ್ವಿನ್ ಮತ್ತು ಸಿಬ್ಬಂದಿಗಳಾದ ವಿಜಯ ಶೆಟ್ಟಿ, ರೇವತಿ, ಮಂಗಳ, ಭವಾನಿ,ಧನರಾಜ್,ಅಶೋಕ್ ಶೆಟ್ಟಿ, ಗ್ರಾಹಕರಾದ ರವೀಂದ್ರ ನಾಥ್ ಹೆಗ್ಡೆ, ಲಕ್ಷ್ಮೀನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು.

ಶಾಖಾಧಿಕಾರಿ ಅಶ್ವಿನ್ ಸ್ವಾಗತಿಸಿ, ಅತ್ರಾಡಿ ಶಾಖೆಗೆ ಗ್ರಾಹಕರು ಕೊಡುತ್ತಿರುವ ಸಹಕಾರವನ್ನು ಸ್ಮರಿಸಿದರು. ಅಶೋಕ್ ಶೆಟ್ಟಿ ವಂದಿಸಿದರು.