ಉಡುಪಿ: ಕಾಂತರಾಜ್ ವರದಿಯನ್ನು ಈ ಸರ್ಕಾರ ತಿರಸ್ಕರಿಸಲೂ ಇಲ್ಲ.. ಅಂಗೀಕರಿಸಿಯೂ ಇಲ್ಲ, ಈಗ ಮತ್ತೊಮ್ಮೆ ಹೊಸ ವರದಿಗೆ ಸಿದ್ದರಾಮಯ್ಯ ಸರ್ಕಾರ ಹೊರಟಿದೆ. 42 ರಿಂದ 50 ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದಾರೆ. ಇದರ ಬಗ್ಗೆ ನಮ್ಮ ಕಠಿಣವಾದ ವಿರೋಧ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲಿಂಗಾಯಿತ ಕ್ರಿಶ್ಚಿಯನ್ ,ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ,ಈಡಿಗ ಕ್ರಿಶ್ಚಿಯನ್ ,ಮಡಿವಾಳ ಕ್ರಿಶ್ಚಿಯನ್..ಹೀಗೆ ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಬಳಕೆ ಮಾಡಿದ್ದಾರೆ. ಮತಾಂತರಗೊಳ್ಳಲು ಸರ್ಕಾರ ಸಂಪೂರ್ಣ ಬೆಂಬಲ ಎಂಬಂತೆ ತೋರುತ್ತಿದೆ. ಆಯೋಗದ ಮೂಲಕ ಮತಾಂತರಕ್ಕೆ ಅವಕಾಶ ನೀಡಿದಂತಾಗಿದೆ. ಹಿಂದೂ ಧರ್ಮದ ಸಣ್ಣ ಜಾತಿಗಳನ್ನು ಸರ್ಕಾರ ಒಡೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಾಂತರ ಮಾಡಲು ಸರ್ಕಾರ ಪ್ರೋತ್ಸಾಹ ನೀಡಿದಂತಾಗಿದೆ. ಸಿದ್ದರಾಮಯ್ಯನವರೇ ಗೊಂದಲ ನಿವಾರಿಸಿ, ಸಾಮಾಜಿಕ ಶೈಕ್ಷಣಿಕ ಜನಗಣತಿ ಅಂದ್ರೆ ಜಾತಿಯ ಜೊತೆ ಕ್ರಿಶ್ಚಿಯನ್ ಸೇರಿಸೋದಾ?ಸರಕಾರವೇ ನೇರ ನಿಂತು ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜಾತಿ ಸೂಚಕದ ಮುಂದೆ ಕ್ರಿಶ್ಚಿಯನ್ ಎಂಬ ಪದ ವಾಪಾಸ್ ಪಡೆಯಬೇಕು. ತಕ್ಷಣ ಆದೇಶ ವಾಪಸ್ ಪಡೆಯಿರಿ ಅಂತ ಆಗ್ರಹಿಸಿದರು.ಬಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರದ ಬಗ್ಗೆ ಮಾತನಾಡಿ, ಕನ್ನಡದ ಬಗ್ಗೆ ಭಾನು ಮುಸ್ತಾಕ್ ಸ್ಪಷ್ಟ ಪಡಿಸದ್ದನ್ನ ಪ್ರತಾಪ್ ಸಿಂಹ ಉಲ್ಲೇಖಿಸಿದ್ದಾರೆ. ಹಿಂದೂ ಧರ್ಮದ ಚಾಮುಂಡೇಶ್ವರಿ ದೇಗುಲ ವಿಚಾರದಲ್ಲಿ ಭಾನು ಮುಸ್ತಾಕ್ ಗೆ ನಂಬಿಕೆ ಇದ್ದರೆ ಉದ್ಘಾಟನೆಗೆ ನಮ್ಮ ಆಕ್ಷೇಪ ಇಲ್ಲ.
ನ್ಯಾಯಾಲಯದಲ್ಲಿ ಅರ್ಜಿ ವಜಾ ಆಗಿದೆ. ನಮ್ಮ ಮೂಲ ಉದ್ದೇಶಕ್ಕೆ ಪೂರಕವಾದ ಆಜ್ಞೆ ನ್ಯಾಯಾಲಯದಿಂದ ಸಿಕ್ಕಿಲ್ಲ. ಬಾನು ಮುಸ್ತಾಕ್ ಕನ್ನಡದ ಬಗೆಗಿನ ತನ್ನ ವಿಚಾರದ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. ಹಿಂದೂ ಧರ್ಮದ ಬಗೆಗಿನ ತನಗಿರುವಂತ ಗೌರವದ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಸದ್ಯಕ್ಕಂತೂ ಪ್ರಕರಣ ಅದೇ ರೀತಿ ಉಳಿದುಬಿಟ್ಟಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸಹಜವಾಗಿ ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ನಮಗೆ ತೃಪ್ತಿ ಇಲ್ಲದಿದ್ದರೆ ಮೇಲ್ಮನೆ ಹಾಕಲು ಅವಕಾಶ ಇದೆಪ್ರತಾಪ ಸಿಂಹರ ಮೂಲ ಉದ್ದೇಶಗಳಿಗೆ ಉತ್ತರ ಸಿಕ್ಕಿಲ್ಲನ್ಯಾಯಾಲಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ನಾವು ಹೆಜ್ಜೆ ಇಡಬೇಕು. ಏನು ಮಾಡಬೇಕೆಂದು ಯೋಚನೆ ಮಾಡುತ್ತೇವೆ ಎಂದರು.












