ಬೆಂಗಳೂರು: ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಈಗಾಗಲೇ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸುತ್ತಿರುವ ಭಾರತ ಸರ್ಕಾರ, ಈಗ ಅದನ್ನು ಇನ್ನಷ್ಟು ವೇಗಗೊಳಿಸಲಿದೆ. ಈ ನಿಟ್ಟಿನಲ್ಲಿ, ದೇಶಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಹೈ-ಸ್ಪೀಡ್ ಉಚಿತ ವೈಫೈ ಒದಗಿಸಲಾಗುವುದು.
ರಾಜ್ಯಸಭೆಯಲ್ಲಿ ರೈಲ್ವೆ ಸೌಲಭ್ಯಗಳ ಕುರಿತು ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರೈಲ್ವೆ ಸಚಿವ ಪ್ರಕಾರ, ಇನ್ನು ಮುಂದೆ, ದೇಶಾದ್ಯಂತ ಸುಮಾರು 6,115 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತ್ಯಂತ ವೇಗದ ಹೈ-ಸ್ಪೀಡ್ ವೈಫೈ ಲಭ್ಯವಿರುತ್ತದೆ.
ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯ:
ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಲಭ್ಯವಿರುವ ಉಚಿತ ವೈಫೈಗೆ ಸಂಪರ್ಕ ಸಾಧಿಸುವ ಮೂಲಕ ಹೈ-ಸ್ಪೀಡ್ ಇಂಟರ್ನೆಟ್ ಪಡೆಯಬಹುದು. ಈ ವೈಫೈ ಬಳಸಿ, ಪ್ರಯಾಣಿಕರು ತಮಗೆ ಬೇಕಾದ ಎಲ್ಲಾ ಚಲನಚಿತ್ರಗಳು, ಗೇಮ್ಸ್, ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕ್ರಿಕೆಟ್ ಪಂದ್ಯವನ್ನು ಆನ್‌ಲೈನ್‌ನಲ್ಲಿ ಲೈವ್ ವೀಕ್ಷಿಸಬಹುದು. ಇದಲ್ಲದೆ, ನಾವು ಈ ವೈಫೈ ಮೂಲಕ ನಮ್ಮ ಕಚೇರಿ ಕೆಲಸಗಳನ್ನು ಸಹ ಮಾಡಬಹುದು. ಆದಾಗ್ಯೂ, ಅನೇಕ ಜನರಿಗೆ ಈ ವೈಫೈ ಅನ್ನು ಹೇಗೆ ಬಳಸುವುದು ಎಂದು ತಿಳಿದಿಲ್ಲ. ರೈಲ್ವೆ ನಿಲ್ದಾಣದಲ್ಲಿ ವೈಫೈಗೆ ಹೇಗೆ ಸಂಪರ್ಕಿಸುವುದು ಎಂದು ಇಲ್ಲಿ ತಿಳಿಯಿರಿ.
ಉಚಿತ ವೈಫೈ ಪಡೆಯುವುದು ಹೇಗೆ?
- ರೈಲು ನಿಲ್ದಾಣದಲ್ಲಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್’ನ ವೈಫೈ ಮೋಡ್ ಅನ್ನು ಆನ್ ಮಾಡಿ.
- ನೀವು ವೈಫೈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ನಿಮಗೆ ರೈಲ್‌ವೈರ್ ವೈಫೈ ನೆಟ್‌ವರ್ಕ್ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ.
- ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಸಂಖ್ಯೆಯೊಂದಿಗೆ ನೋಂದಾಯಿಸಲು ಅದು ನಿಮ್ಮನ್ನು ಕೇಳುತ್ತದೆ. ಅಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ.
- ನಂತರ ನಿಮ್ಮ ಫೋನ್ ಸಂಖ್ಯೆಗೆ SMS ಮೂಲಕ OTP ಬರುತ್ತದೆ.
- ಅಲ್ಲಿ ನೀವು ಸ್ವೀಕರಿಸಿದ 6 ಅಂಕಿಯ OTP ಸಂಖ್ಯೆಯನ್ನು ನಮೂದಿಸಿ. ನೀವು ತಕ್ಷಣವೇ Wi-Fi ಗೆ ಸಂಪರ್ಕಗೊಳ್ಳುತ್ತೀರಿ.
- ನಂತರ ನೀವು ಹೆಚ್ಚಿನ ವೇಗದ ಇಂಟರ್ನೆಟ್ ಬಳಸಬಹುದು.












