ಬೆಂಗಳೂರು; ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನ್ನ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನ ಸಿನಿಮಾ ಪ್ರೇಕ್ಷಕರಿಗೆ ಮಾರ್ಕ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದ ಕಿಚ್ಚ ಸುದೀಪ್, ಇದೀಗ ಸಿನಿಮಾ ಬಗ್ಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದ್ದಾರೆ. ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದೆ. ಆದರೆ ಚಿತ್ರದ ಲಿರಿಕಲ್ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ.
ಕಿಚ್ಚ ಹೇಳಿದ್ದೇನು.?
ಲಿರಿಕಲ್ ಹಾಡಿನ ವಿಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಜನೀಶ್ ಅವರ ಅದ್ಭುತವಾದ ಸ್ಟ್ಯಾಂಡ್ ಔಟ್ ಸಂಯೋಜನೆ ಇದೆ. ಶೋಬಿಮಾಸ್ಟರ್ ಅವರ ಅಸಾಧಾರಣ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅದರ ಪ್ರತಿಯೊಂದು ಭಾಗವೂ ನನಗೆ ತುಂಬಾ ಇಷ್ಟವಾಯಿತು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ನಟ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
‘ಮಾರ್ಕ್’ ಸಿನಿಮಾದ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಕಿಚ್ಚನ ವೃತ್ತಿಜೀವನದಲ್ಲಿ ಬೃಹತ್ ಮೈಲಿಗಲ್ಲಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಇದೀಗ ಅವರೇ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿಯೇ ಸಿನಿಮಾದ ನಿರೀಕ್ಷೆ ಇನ್ನೂ ಹೆಚ್ಚಾಗಿದೆ.












