‘ಬಿಗ್‌ಬಾಸ್’ ಕನ್ನಡ ಸೀಸನ್ 12 ಸೆಪ್ಟೆಂಬರ್ 28ರಿಂದ ಶುರುವಾಗಲಿದೆ ಎಂದು ಕಲರ್ಸ್ ಕನ್ನಡ ಈಗಾಗಲೇ ದೃಢಪಡಿಸಿದೆ. ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಯಾವೆಲ್ಲಾ ಕಂಟೆಸ್ಟೆಂಟ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಬಹುದು ಎಂಬ ಪ್ರಶ್ನೆ ಮಾತ್ರ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಇದರ ನಡುವೆ ಈ ಬಾರಿ ಬಿಗ್ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್ ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಇದೀಗ ಕಲರ್ಸ್ ಕನ್ನಡ ಬುಧವಾರ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದೆ.
ಕಲರ್ಸ್ ಕನ್ನಡ ಸೆ.24ರಂದು ಹಂಚಿಕೊಂಡಿರುವ ವಿಡಿಯೋದಲ್ಲಿ ”ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ಇದೇ ಭಾನುವಾರ ಸಂಜೆ 6 ಕ್ಕೆ ಮತ್ತೆ ಪ್ರತಿ ರಾತ್ರಿ 9:30 ಎಂದು ದೃಶ್ಯಗಳಲ್ಲಿ ಕಾಣಬಹುದಾಗಿದೆ. ಇನ್ನು ಬಿಗ್ ಬಾಸ್ ಟ್ರೆಂಡ್ ಫಾಲೋವರ್ ಅಲ್ಲ, ಬಿಗ್ ಬಾಸ್ ಟ್ರೆಂಡ್ ಕ್ರಿಯೇಟರ್ ಎಂದು ವಿಡಿಯೋ ಕೆಳಗಡೆ ಬರೆಯಲಾಗಿದೆ. ಹನ್ನೊಂದು ಸೀಸನ್ ನೋಡಿರೋ ನಮಗೆ, ಎಲ್ಲಾ ಗೊತ್ತು ಅನ್ನೋರಿಗೆ ‘ಓ ಭ್ರಮೆ..’ ಅಂತಾರೆ ಬಿಗ್ ಬಾಸ್.! ‘ಇದು ಸೀಸನ್ ಹನ್ನೆರಡು, Expect the Unexpected.! ಎಂದು ಸೆ.13ಕ್ಕೆ ಸುದೀಪ್ ಅವರಿದ್ದ ವಿಡಿಯೋವೊಂದು ಬಿಡುಗಡೆ ಮಾಡಿದ್ದ ಕಲರ್ಸ್ ಕನ್ನಡ, ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.


















