ಬೆಂಗಳೂರು:ನಟ ಮಡೆನೂರು ಮನು ಅತ್ಯಾಚಾರ ಪ್ರಕರಣ:ಮನು ಪೋಲಿಸರ ವಶಕ್ಕೆ: ನಟಿ ಆರೋಪ ಸುಳ್ಳು ಎಂದ ಪತ್ನಿ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೋಮವಾರದ ವರೆಗೆ (ಮೇ 26) ತಮ್ಮ ವಶಕ್ಕೆ ಪಡೆದಿದ್ದಾರೆ. ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತೆಯೂ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು.

ನಟಿ ಹೇಳ್ಳೋದೆಲ್ಲ ಸುಳ್ಳು:

ಮನು ಪತ್ನಿ ಪತಿ ಮನು ಪರ ಕಾನೂನು ಹೋರಾಟ ಮಾಡುವುದಾಗಿ ಅವರ ಪತ್ನಿ ದಿವ್ಯಾ ಹೇಳಿದ್ದಾರೆ. ನನ್ನ ಪತಿ ಬಗ್ಗೆ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗಿಯಾಗಿದ್ದ ಸಂತ್ರಸ್ತೆ, ನಟಿ ಹೇಳ್ಳೋದೆಲ್ಲ ಸುಳ್ಳು, ನನ್ನ ಗಂಡನಿಗೆ ನ್ಯಾಯ ಸಿಗುವ ತನಕ ಹೋರಾಡುತ್ತೇನೆ. ನನ್ನ ಗಂಡ ಸಿನೆಮಾ ರಂಗದಲ್ಲಿ ಬೆಳೆಯುತ್ತಿದ್ದಾರೆ ಅಂತ ಷಡ್ಯಂತ್ರ ಮಾಡಿದ್ದಾರೆ. ಬೇಕಂತಲೇ ಅವರ ವಿರುದ್ಧ ಪಿತೂರಿ ಮಾಡಲಾಗಿದೆ. “ಮಚ್ಚಾ ನೀನು ಬೆಳೆಯಬೇಕು’ ಅಂತ ಅಂದು ಹೇಳಿದ್ದ ನಟಿ, ಈಗ್ಯಾಕೆ ಆರೋಪ ಮಾಡುತ್ತಿದ್ದಾರೆ. ದುರುದ್ದೇಶದಿಂದ ಆಕೆ ಆರೋಪ ಮಾಡಿದ್ದಾರೆ ಎಂದರು.