ಬೆಂಗಳೂರು:ಜು.20 ರಂದು ಬಿಲ್ಲವ ಅಸೋಸಿಯೇಶನ್, ಬೆಂಗಳೂರು ಇವರ ವತಿಯಿಂದ ಆಟಿಡೊಂಜಿ ದಿನ- 2025 ಕಾರ್ಯಕ್ರಮವು ದೇವಕಿ ಆನಂದ ಸುವರ್ಣ ಕನ್ವೆನ್‌ಷನ್ ಹಾಲ್, ಬಿಲ್ಲವ ಭವನದಲ್ಲಿ ನಡೆಯಲಿದೆ.
50ನೇ ಸುವರ್ಣ ಸಂಭ್ರಮದ ಪ್ರಯುಕ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 9.30 ಗಂಟೆಗೆ ಖ್ಯಾತ ಹಿನ್ನಲೆ ಗಾಯಕಿ ಶ್ರೀಮತಿ ಕಲಾವತಿ ದಯಾನಂದ್ ರವರಿಂದ “ಜಾನಪದ ಝೇಂಕಾರ” ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10.30 ಗಂಟೆಗೆ ಡಾ|| ರಕ್ಷಾ ನಿರ್ದೇಶನದ ಮಹಿಳಾ ಘಟಕದ ಭಜನಾ ತಂಡದವರಿಂದ ನೃತ್ಯ ರೂಪಕ ಸ್ವಾಗತ ಕುಣಿತ ಭಜನೆ ನಡೆಯಲಿದೆ.
ಮಹಿಳಾ ಭಜನಾ ತಂಡದಲ್ಲಿ ವೀಣಾ ವಿಶ್ವನಾಥ್, ರತ್ನ ಜಯರಾಮ್ ,ಲಕ್ಷ್ಮಿ ಭಾಸ್ಕರ್, ದಿವ್ಯ ದಿನೇಶ್, ಯಶೋಧ ರಮಾನಂದ್, ಪೂರ್ಣಿಮಾ ಬಾಬು, ಜ್ಯೋತಿ ಮಹೇಶ್, ಸೌಮ್ಯ ಸೂರಜ್, ಸೀಮಾ ಕಿಶೋರ್, ಸರಿತಾ ಹರೀಶ್, ವಿನಯ ಗುರುಪ್ರಸಾದ್, ಸುಮಿತ್ರ ಚಿದಾನಂದ್ ಇವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.00 ರಿಂದ ಮಹಿಳಾ ಯಕ್ಷಗಾನ ತಂಡದವರಿಂದ ಶ್ರೀ ಕೃಷ್ಣಲೀಲಾಮೃತಂ ಕನ್ನಡ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 3.30 ರಿಂದ ಪುರುಷ ಯಕ್ಷಗಾನ ತಂಡದವರಿಂದ ಶ್ರೀ ದೇವಿ ಲೀಲಾಮೃತಂ ಕನ್ನಡ ಯಕ್ಷಗಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.












