ಪ್ರಥಮ ಪಿಯುಸಿ ಪ್ರವೇಶ ದಾಖಲಾತಿ ಜುಲೈ 31ರವರೆಗೆ ವಿಸ್ತರಣೆ; ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಪ್ರಥಮ ಪಿಯುಸಿ ತರಗತಿಗಳ ಪ್ರವೇಶಕ್ಕೆ ದಾಖಲಾತಿ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಆದೇಶಿಸಿದೆ.ಈ ತರಗತಿಗಳ ಪ್ರವೇಶಕ್ಕೆ ಕೊನೆಯ ದಿನಾಂಕವನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಆದರೆ ಪ್ರವೇಶಾತಿ ಬಯಸಿ ವಿದ್ಯಾರ್ಥಿಗಳು ಇನ್ನೂ ಬರುತ್ತಿರುವ ಕಾರಣ, ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದಂಡ ಶುಲ್ಕ ₹670 ಮತ್ತು ವಿಶೇಷ ದಂಡ ಶುಲ್ಕ ₹2,220 ಸೇರಿ ಒಟ್ಟು ₹2,890 ಪಾವತಿಸಿ, ಪ್ರವೇಶ ಪಡೆಯಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.