ಬೆಂಗಳೂರು: ಖ್ಯಾತ ಸಾಮಾಜಿಕ ಕಾರ್ಯಕರ್ತ, ಬಜರಂಗದಳ ಮಾಜಿ ಮುಖಂಡ ಮಹೇಂದ್ರ ಕುಮಾರ್ ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಇವರು ಬಜರಂಗದಳದಲ್ಲಿ ತಮ್ಮ ಸಾಮಾಜಿಕ ಜೀವನ ಆರಂಭಿಸಿದ್ದರು, ಆ ಬಳಿಕ ಶಾಂತಿ, ಸೌಹಾರ್ದತೆಯ ಸಂದೇಶಗಳನ್ನು ಸಾರಲು ಹೋರಾಡಿದ್ದರು. ಇತ್ತೀಚೆಗಷ್ಟೇ ಸಿಎಎ. ಎನ್ಆರ್ ಸಿ ವಿರುದ್ದ ಧ್ವನಿ ಎತ್ತಿದ್ದರು. ಹಾಗೂ ವಿವಿಧ ಸಾಮಾಜಿಕ ಹೋರಾಟಗಳಿಗೆ ಜನಬೆಂಬಲ ನೀಡಿ ಗುರುತಿಸಿಕೊಂಡಿದ್ದರು.ಸಾಮಾಜಿಕ ಜಾಲ ತಾಣ ಯು ಟ್ಯೂಬ್ ಗಳಲ್ಲಿ ಸಾಮಾಜಿಕ ಸಂದೇಶ ನೀಡುವ ಅಭಿಯಾನಗಳನ್ನು ಆರಂಭಿಸುವ ಮೂಲಕ ತಮ್ಮದೇ ಆದ ಜನ ಬೆಂಬಲವನ್ನು ಪಡೆದಿದ್ದರು. ಮೂಲತಃ ಮಹೇಂದ್ರ ಕುಮಾರ್ ಚಿಕ್ಕಮಗಳೂರಿನ ಕೊಪ್ಪದವರಾಗಿದ್ದರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.