ಸತತ ಮೂರು ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಫ್ಯಾಷನ್ ವೀಕ್ (Bangalore Fashion Week 2024) ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಡೆದ ಶೋನಲ್ಲಿ ಸೆಲೆಬ್ರೆಟಿ ಡಿಸೈನರ್ಗಳು, ಮಾಡೆಲ್ಗಳು, ಫ್ಯಾಷನ್ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.
ಸಮ್ಮರ್ ಸೀಸನ್ ಡಿಸೈನರ್ವೇರ್ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್ಗಳು ಬಿಗ್ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಾ ನೋಡುಗರ ಮನ ಸೆಳೆದರೇ, ಸೆಲೆಬ್ರೆಟಿ ಡಿಸೈನರ್ಗಳು, ಕೊರಿಯಾಗ್ರಾಫರ್ಗಳು ಹಾಗೂ ಸೆಲೆಬ್ರೆಟಿಗಳು ರ್ಯಾಂಪ್ನ ಈ ಪ್ರದರ್ಶನಕ್ಕೆ ಸಾಕ್ಷಿಯಾದರು. ಸತತ ಮೂರು ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಫ್ಯಾಷನ್ ವೀಕ್ನಲ್ಲಿ, (Bangalore Fashion Week 2024) ರಾಷ್ಟ್ರದ ನಾನಾ ಕಡೆಯಿಂದ ಸೆಲೆಬ್ರೆಟಿ ಡಿಸೈನರ್ಗಳು, ಮಾಡೆಲ್ಗಳು, ಫ್ಯಾಷನ್ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಆಯಾ ಡಿಸೈನರ್ಗಳ ಡಿಸೈನರ್ವೇರ್ಗಳು ಒಂದರ ನಂತರ ಮತ್ತೊಂದರಂತೆ ಫ್ಯಾಷನ್ ವೀಕ್ನಲ್ಲಿ ಅನಾವರಣಗೊಂಡವು.