ಬಾಳೆಹಣ್ಣಿನ ಮಾಲ್ಪುವಾ ತಯಾರಿಸುವ ವಿಧಾನ ತಿಳಿಯೋಣ ಬನ್ನಿ..

ಮನೆಯಲ್ಲೇ ರುಚಿ ರುಚಿಯಾದ ಬಾಳೆಹಣ್ಣಿನ ಮಾಲ್ಪುವಾ ತಯಾರಿಸುವ ವಿಧಾನ ತಿಳಿಯೋಣ ಬನ್ನಿ..

ಬೇಕಾಗುವ ಪದಾರ್ಥಗಳು…

ಚುಕ್ಕಿ ಬಾಳೆಹಣ್ಣು- 1

ಹಾಲು- 3 ಬಟ್ಟಲು

ಸಕ್ಕರೆ- 1.5 ಬಟ್ಟಲು

ಗೋಧಿ ಹಿಟ್ಟು- 1 ಬಟ್ಟಲು

ಸಣ್ಣ ರವೆ- ಒಂದು ಸಣ್ಣ ಬಟ್ಟಲು

ಜೀರಿಗೆ- ಒಂದು ಚಮಚ

ಏಲಕ್ಕಿ ಪುಡಿ- ಅರ್ಧ ಚಮಚ

ಕ್ರೀಮ್- 2 ಚಮಚ

ಕೇಸರಿ ದಳ- 10

ಎಣ್ಣೆ-ಕರಿಯಲು

ಮಾಡುವ ವಿಧಾನ…

ಮೊದಲು ಮಿಕ್ಸಿ ಜಾರ್’ಗೆ ಒಂದು ಬಾಳೆಹಣ್ಣು ಹಾಗೂ ಅರ್ಧ ಬಟ್ಟಲು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, ಗೋಧಿಹಿಟ್ಟು, ರವೆ, ಜೀರಿಗೆ, ಜೀರಿಗೆ, ಏಲಕ್ಕಿ ಪುಡಿ, ಕ್ರೀಮ್ ಹಾಕಿ ಮಿಶ್ರಣ ಮಾಡಿಕೊಂಡು, ಸ್ವಲ್ವ ಸ್ವಲ್ಪವೇ ಹಾಲನ್ನು ಹಾಕಿ ಉಂಡೆ ಕಟ್ಟದಂತೆ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.

ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ನೀರು, ಸಕ್ಕರೆ ಹಾಗೂ ಕೇಸರಿ ದಳವನ್ನು ಹಾಕಿ ಪಾಕ ಸಿದ್ದಪಡಿಸಿಟ್ಟುಕೊಳ್ಳಬೇಕು.

ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಬೇಕು. ಎಣ್ಣೆ ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವರೆಗೂ ಕರಿಯಬೇಕು. ನಂತರ ಈಗಾಗಲೇ ತಯಾರಿಸಿಕೊಂಡ ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷಗಳಾದ ಬಳಿಕ ತೆಗೆದರೆ ರುಚಿಕರವಾದ ಬಾಳೆಹಣ್ಣಿನ ಮಾಲ್ಪುವಾ ಸವಿಯಲು ಸಿದ್ಧ.