ನಾವೆಲ್ಲಾ ಬಾಳೆಹಣ್ಣು ಚಂದ ಮಾಡಿ ತಿನ್ನುತ್ತೇವೆ, ಆದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಮಾತ್ರ ವೇಸ್ಟ್ ಅಂತ ತಿಳಿದು ಸಿಕ್ಕ ಕಡೆ ಬಿಸಾಕಿಬಿಡ್ತೇವೆ. ಆದ್ರೆ ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನ ಗೊತ್ತಾದ್ರೆ ನೀವು ಸಿಪ್ಪೆ ಬಿಸಾಡುವ ಮೊದಲು ಒಮ್ಮೆ ಯೋಚನೆ ಮಾಡೇ ಮಾಡ್ತೀರಾ.
ಹಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೇ ದೊಡ್ಡ ಸಮಸ್ಯೆ.ಹಳದಿಯಾಗಿದ್ರೆ ಹಲ್ಲಿನ ಚಂದವೇ ಹೋಗಿಬಿಡುತ್ತೆ ಅನ್ನುವವರು ತುಂಬಾ ಮಂದಿ.
ಅಂತಹವರು ಮಾಡಬೇಕಾವುದು ಇಷ್ಟೇ, ಎರಡು ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲನ್ನು ಚೆನ್ನಾಗಿ ಉಜ್ಜಿ ಆಮೇಲೆ ನೋಡಿ ನಿಮ್ಮ ಹಲ್ಲು ಚಕ ಚಕ ಹೊಳೆಯುತ್ತೆ ಹಳದಿ ಬಣ್ಣ ಮಾಯವಾಗಿರುತ್ತೆ.
ಇನ್ನು ನಿಮ್ಮ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆ ಸವರಿಕೊಂಡು, ನಿರ್ದಿಷ್ಟವಾಗಿ ಸಮಸ್ಯೆ ಇರುವ ಜಾಗದ ಕಡೆ ತಿಕ್ಕಿ ನೋಡಿ, 30 ನಿಮಿಷಗಳ ಕಾಲ ಬಿಡಿ. ಪ್ರತಿ ದಿನ ಇದೇ ರೀತಿ ಮಾಡಿ ಆಮೇಲೆ ನಿಮ್ಮ ಚರ್ಮದಲ್ಲಿ ಆಗುವ ಪೊಸಿಟಿವ್ ಬದಲಾವಣೆಗಳನ್ನು ನೀವೇ ಗಮನಿಸಿ.ಇಷ್ಟು ಮಾತ್ರವಲ್ಲ ಶೂ ಗೆ ತಿಕ್ಕಿದರೆ ಶೂ ಹೊಳೆಯುತ್ತದೆ. ಮುಖಕ್ಕೆ ಹಚ್ಚಿದರೆ ಮೊಡವೆ ಮಾಯವಾಗುತ್ತದೆ.
ಈ ಎಲ್ಲಾ ಸಮಸ್ಯೆಗಳನ್ನು ಬಾಳೆಹಣ್ಣು ಸಿಪ್ಪೆ ಮಾತ್ರ ಕೂಡಲೇ ನಿವಾರಿಸಬಲ್ಲುದು ಒಮ್ಮೆ ಪ್ರಯತ್ನಿಸಿ ನೋಡಿ