ಕೊಳ್ಳೇಗಾಲ ತಾಲ್ಲೂಕಿನಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ ವರ ಮತ್ತು ಆತನ ಪೋಷಕರು ಹಾಗೂ ವಧುವಿನ ತಾಯಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ, ನಗರದ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಜೈಲು ಶಿಕ್ಷೆಯೊಂದಿಗೆ ತಲಾ ₹5,000 ದಂಡ ವಿಧಿಸಿದೆ.
ಗುಂಡಿ ಮಾಳದ ಗ್ರಾಮದ ಮಹದೇವ ಬಸಮ್ಮ ದಂಪತಿ, ವರ ಮಹದೇವ ಸ್ವಾಮಿ ಹಾಗೂ ಯಳಂದೂರು ತಾಲ್ಲೂಕಿನ ನಾಗಮ್ಮ ಶಿಕ್ಷೆಗೆ ಗುರಿಯಾದವರು.