ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12 ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
1 ರಿಂದ 12 ವರ್ಷದ ಮಕ್ಕಳಿಗೆ ಬಾಲಶಿವನ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ಈ ಸ್ಪರ್ಧೆಯು 1 ರಿಂದ 4 ವರ್ಷದ ಪುಟಾಣಿಗಳಿಗೆ “ಸಬ್ ಜೂನಿಯರ್”, 4 ರಿಂದ 8 ವರ್ಷದ ಮಕ್ಕಳಿಗೆ “ಜೂನಿಯರ್” ಮತ್ತು 8 ರಿಂದ 12 ವರ್ಷದ ಮಕ್ಕಳಿಗೆ “ಸೀನಿಯರ್” ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪುಟಾಣಿಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅಲ್ಲದೆ, ಮೂರು ವಿಭಾಗಗಳಲ್ಲಿಯೂ ತಲಾ ಹತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.
ಸ್ಪರ್ಧೆಯ ನಿಯಮಗಳು:
- ಪುಟಾಣಿಗಳ ವಯಸ್ಸಿನ ಪುರಾವೆ ತರತಕ್ಕದ್ದು.
- ಬಾಲಶಿವನ ವೇಷಧಾರಿಗಳಾಗಿರಬೇಕು
- ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕುದ್ದು (ನೀರು, ಬೆಂಕಿ ಹಾಗೂ ಸುಡುಮದ್ದು ಬಳಸುವಂತಿಲ್ಲ)
- ಸ್ಪರ್ಧೆಯ ಫಲಿತಾಂಶಗಳನ್ನು ವೇಷ ಭೂಷಣ, ಅಭಿನಯ ಹಾಗೂ ಸೃಜನಶೀಲತೆ ಪರಿಗಣಿಸಿ ಸ್ಥಳದಲ್ಲೇ ಅಂದೇ ಬಹುಮಾನಗಳನ್ನು ನೀಡಲಾಗುವುದು.
- ನಿರ್ಣಾಯಕರ ತೀರ್ಮಾನವೇ ಅಂತಿಮ
ನೋಂದಾವಣೆಗಾಗಿ: 7899476670 ಕರೆಮಾಡಬಹುದು.
ಅಥವಾ https://docs.google.com/forms/d/1E4fFiBjk4ZTa-5_qrw97waLkMfsbKpA00sZa89Pc5F0/edit?ts=63e13796 ಲಿಂಕ್ ಕ್ಲಿಕ್ ಮಾಡಬಹುದು.
ಇದಲ್ಲದೆ ಅದೇ ದಿನದಂದು ಸಮರ್ಪಣ ದಿವಸ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ತುಪ್ಪ, ಎಳ್ಳು, ಭತ್ತ, ಎಳ್ಳೆಣ್ಣೆ, ಗೇರುಬೀಜ, ದ್ರಾಕ್ಷಿ, ತೆಂಗಿನಕಾಯಿ, ಅಕ್ಕಿ ಮುಂತಾದವುಗಳನ್ನು ಸಮರ್ಪಿಸಬಹುದಾಗಿದ್ದು, ಈ ಕಾರ್ಯವು ಮಾರ್ಚ್ ೫ ರ ವರೆಗೆ ನಡೆಯಲಿದೆ. ಸೇವೆಗೆ ಬೇಕಾಗುವ ವಸ್ತುಗಳು ದೇವಸ್ಥಾನದ ಸಮರ್ಪಣ ಕೌಂಟರಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆವರೆಗೆ ಲಭ್ಯವಿರಲಿದೆ.