ಶ್ರೀ ನವದುರ್ಗಾ ಪ್ರಸಾದ್ ಬಸ್ ಸಂಸ್ಥೆಯ ಸ್ಥಾಪಕ ಬಾಲಕೃಷ್ಣ ರೈ ನಿಧನ

ಮಂಗಳೂರು: ಕೆನರಾ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ, ಶ್ರೀ ನವದುರ್ಗಾ ಪ್ರಸಾದ್ ಬಸ್ ಸಂಸ್ಥೆಯ ಸ್ಥಾಪಕ ಕನಕಪ್ಪಾಡಿ ಬಿ. ಬಾಲಕೃಷ್ಣ ರೈ (74) ಅವರು ಇಂದು ನಿಧನ ಹೊಂದಿದರು.

ರೈಯವರು ಹಲವಾರು ವರ್ಷಗಳಿಂದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಹಲವಾರು ಹಳ್ಳಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಿದ್ದಾರೆ. ಅವರು ಕನಕಪ್ಪಾಡಿ ದೇವಳದ ಆಡಳಿತ ಮೊಕ್ತೇಸರರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಮೂರು ಪುತ್ರಿಯರನ್ನು ಅಗಲಿದ್ದಾರೆ.

ಸಂತಾಪ:
ಕೆ. ಬಿ. ಬಾಲಕೃಷ್ಣ ರೈ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಕರ್ನಾಟಕ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.
ರೈಯವರ ನಿಧನ ಸಾರಿಗೆ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಕುಯಿಲಾಡಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.