ಬಜಾಜ್ ಗ್ರೂಪ್ ಚೇರ್ಮನ್ ರಾಹುಲ್ ಬಜಾಜ್ ಇನ್ನಿಲ್ಲ

ನವದೆಹಲಿ: ಬಜಾಜ್ ಸಮೂಹಗಳ ಚೇರ್ಮನ್ ರಾಹುಲ್ ಬಜಾಜ್ ಇಂದು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಖ್ಯಾತ ಉದ್ಯಮಿ ಮತ್ತು ಬಜಾಜ್ ಸಮೂಹಗಳ ಚೇರ್ಮನ್ ರಾಹುಲ್ ಬಜಾಜ್ ಇಂದು ಪುಣೆಯಲ್ಲಿ ನಿಧನರಾಗಿದ್ದಾರೆ.

ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇದ್ದು, ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.