ಕೀ ಇಲ್ಲದೇ ಮೊಬೈಲ್ ಆ್ಯಪ್ ಮೂಲಕ ಚಾಲು ಆಗುತ್ತೆ ಈ ಸ್ಕೂಟರ್: “ಚೇತಕ್” ರಾಣಿ ಮತ್ತೆ ಬರ್ತಿದ್ದಾಳೆ !

ಅಂದು ಬಜಾಜ್ ಚೇತಕ್ ಅಂದ್ರೆ ಸಾಕು ಎಲ್ಲಾ ವಯೋಮಾನದವರೂ ಆ ಹೆಸರು ಕೇಳಿದಾಕ್ಷಣ ಹುಚ್ಚೆದ್ದು ಕುಣಿಯುತ್ತಿದ್ದರು. ನಂಗೊಂದು ಚೇತಕ್  ತಗೋಬೇಕು ಅನ್ನೋದು ಆ ಕಾಲದ ಅತ್ಯಂತ ದೊಡ್ಡ ಕನಸ್ಸಾಗಿತ್ತು. ಈಗ ಅದೇ ಬಜಾಜ್ ಚೇತಕ್ ಮತ್ತೆ ಹೊಸ ರೂಪ ತೊಟ್ಟು ಮಾರುಕಟ್ಟೆಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಮತ್ತೆ  ಲಕ್ಷಾಂತರ ಗ್ರಾಹಕರನ್ನು ತಬ್ಬಿಕೊಳ್ಳಲು ಬಜಾಜ್ ಅನ್ನೋ ಮಾಯಾಂಗನೆ ಮೈತೆರೆದು ನಿಂತಿದ್ದಾಳೆ.ಕೀ ಇಲ್ಲದೇ ಮೊಬೈಲ್ ಆ್ಯಪ್ ಮೂಲಕ ಚಾಲು ಮಾಡಲು ಸಾಧ್ಯವಾಗುವ ಈ ಸ್ಕೂಟರ್ ಇನ್ನಷ್ಟು ಹೊಸ ಹೊಸ ಫೀಚರ್ಸ್ ಗಳನ್ನು ಹೊಂದಿದೆ.

ಅಂದ ಹಾಗೆ  ಬಜಾಜ್ ನ ಈ ಸ್ಕೂಟರ್ ಗೆ  ಬಜಾಜ್ ಚಿಕ್ ಎಂದು ಹೆಸರಿಡಲಾಗಿದ್ದು ಸ್ಕೂಟರ್ ಆಕರ್ಷಕವಾಗಿ ಸೆಳೆಯುವಂತಿದೆ.

 

ಜನವರಿಯಿಂದ ಸೇಲ್;

ಈ ಸ್ಕೂಟರ್ ಪುಣೆ, ಬೆಂಗಳೂರು ಸೇರಿದಂತೆ ಅನೇಕ ಮಹಾನಗರದಲ್ಲಿ ಜನವರಿಯಿಂದ ಲಭ್ಯವಿದ್ದು,   ಸೇಲ್ ಆರಂಭಗೊಳ್ಳುವ ನಿರೀಕ್ಷೆ ಇದೆ. ಹೊಸ ವರ್ಷಕ್ಕೆ ಬಜಾಜ್ ನ ಈ ಹೊಸ ಸ್ಕೂಟರ್ ಗ್ರಾಹಕರನ ಎದೆಯಲ್ಲಿ ಖುಷಿಯ ಕಿಕ್ ಕೊಡುವ ಸಾಧ್ಯತೆ ಇದೆ.

ಏನ್ ಸ್ಪೆಷಲ್?

ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಸ್ಟ್ಯಾಂಡರ್ಡ್ 5-15ಎಎಂಪಿ ಎಲೆಕ್ಟ್ರಿಕಲ್ ಔಟ್ ಲೆಟ್ ಗಳಲ್ಲಿ ಬ್ಯಾಟರಿ ಚಾರ್ಜ್  ಮಾಡಬಹುದು. ಇ-ಸ್ಕೂಟರ್ ನಲ್ಲಿ ಇಂಟೆಲಿಜೆಂಟ್ ಬ್ಯಾಟರಿ ಮ್ಯಾನೇಜ್ ಮೆಂಟ್ ಸಿಸ್ಟಮ್ ಇದೆ, ಗ್ರಾಹಕರಿಗೆ ಮನೆಯಲ್ಲಿಯೇ ಚಾರ್ಚ್ ಸ್ಟೇಷನ್ ಅವಕಾಶವಿದೆ.

ಬಜಾಜ್ ಚೇತಕ್ ಎರಡು ಡ್ರೈವಿಂಗ್ ಮಾದರಿಯ ಆಫರ್ ನೀಡಿದ್ದು, ಇಕೋ(95ಕಿಲೋ ಮೀಟರ್ ದೂರ) ಮತ್ತು ಸ್ಪೋರ್ಟ್ (85 ಕಿಲೋ ಮೀಟರ್.) ಮಾದರಿಯಲ್ಲಿ ರಸ್ತೆಗೆ ಎಂಟ್ರಿ ಹೊಡೆಯಲಿದೆ.ಒಟ್ಟಾರೆ ಆರು ಬಣ್ಣ ಗಳಲ್ಲಿ ಈ ಸ್ಕೂಟರ್ ಲಭ್ಯವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.