ಬಜಗೋಳಿ: ಕೀರ್ತನ್ ಸಾಲಿಯಾನ್ ನಿರ್ದೇಶನದ ‘ಛಾಯೆ’ ತುಳು ಕಿರುಚಿತ್ರದ ಮುಹೂರ್ತ ಸಮಾರಂಭ ಈಚೆಗೆ ಬಜಗೋಳಿಯ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಅಶು ಬಜಗೋಳಿ ಮತ್ತು ಕಿರಣ್ ನೆಲ್ಲಿಗುಡ್ಡೆ ಅವರ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿರುವ ಈ ಕಿರುಚಿತ್ರಕ್ಕೆ ಹರಿಚಂದ್ರ ಭಟ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುರೇಶ್ ಸಾಲಿಯಾನ್ ಬಜಗೋಳಿ, ಉಮೇಶ್ ಸಾಲಿಯಾನ್ ಬಜಗೋಳಿ, ಪ್ರವೀಣ್ ಭಂಡಾರಿ, ಪ್ರಶಾಂತ್ ಹರಿಕಂಡಿಗೆ, ರಾಜೇಶ್, ಸಚಿನ್ ಮಲ್ಯ, ಅಕ್ಷಯ್ ಕುಮಾರ್, ಸುನೀತ್ ಬಜಗೋಳಿ, ಕಿಶನ್ ಸಾಲಿಯಾನ್, ಲತೇಶ್ ಬಜಗೋಳಿ, ಅಭಿ ಬಜಗೋಳಿ, ವಿನಾಯಕ್ ಹಾಗೂ ಕಿರುಚಿತ್ರ ನಾಯಕಿ ಜಯಲಕ್ಷ್ಮಿ ಕೋಟೆಬಾಗಿಲು ಉಪಸ್ಥಿತರಿದ್ದರು.