ಬ್ಯೂಟಿ ಪಾರ್ಲರ್‍ಗಳಲ್ಲಿ ಆದಷ್ಟು ರಾಸಾಯನಿಕ ಯುಕ್ತ ಉತ್ಪನ್ನಗಳನ್ನು ಕಡಿಮೆ ಬಳಸಿ: ಡಾ| ವನಿತಾ ಲಕ್ಷ್ಮೀ

ಕುಂದಾಪುರ: ಈಗ ಬ್ಯೂಟಿ ಪಾರ್ಲರ್‍ಗಳಲ್ಲಿಯೂ ಪೈಪೋಟಿ ಆರಂಭವಾಗಿದ್ದು, ಸ್ವಚ್ಛತೆಯೊಂದಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಗಮನ ಸೆಳೆಯಬಹುದು. ಬ್ಯೂಟಿ ಪಾರ್ಲರ್‍ಗಳಲ್ಲಿ ಆದಷ್ಟು ರಾಸಾಯನಿಕ ಯುಕ್ತ ಉತ್ಪನ್ನಗಳನ್ನು ಕಡಿಮೆ ಬಳಸಿ, ಇದರಿಂದ ಚರ್ಮದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ ಎಂದು ಉಡುಪಿಯ ಇನ್ನರ್‍ವೀಲ್ ಕ್ಲಬ್‍ನ ಅಧ್ಯಕ್ಷೆ ಡಾ| ವನಿತಾ ಲಕ್ಷ್ಮೀ ಸಲಹೆ ನೀಡಿದರು.

ಅವರು ಮಂಗಳವಾರ ಕುಂದಾಪುರ ಹಾಗೂ ಬೈಂದೂರು ವಲಯದ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ವತಿಯಿಂದ ಇಲ್ಲಿನ ಹೋಟೆಲ್ ಹರಿಪ್ರಸಾದ್‍ನ ಅಕ್ಷತಾ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಕೇವಲ ಬಾಹ್ಯ ಸೌಂದರ್ಯ ಮಾತ್ರ ಸೌಂದರ್ಯವಲ್ಲ. ನಾವು ಮಾಡುವ ಕೆಲಸ, ಸೇವೆ, ಸಾಧನೆಗಳು ಎಲ್ಲರೆದುರು ಗುರುತಿಸುವಂತೆ ಮಾಡುವುದರಿಂದ ಸಾಧನೆ ಸಹ ಸೌಂದರ್ಯದ ಪ್ರತಿ ಬಿಂಬ ಎಂದರು.
ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷರಾದ ಕುಂದಾಪುರದ ಎಡ್ನಾ ಜತ್ತನ್ನ, ಬೈಂದೂರಿನ ಸುಮಿತ್ರಾ ಎಸ್. ಕುಂದರ್ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಧನ ಸಹಾಯ ನೀಡಲಾಯಿತು.
ಬೈಂದೂರು ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷ ಕೆ. ಶಾರದಾ, ಉಡುಪಿ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಸ್ಥಾಪಕಾಧ್ಯಕ್ಷೆ ಮರಿಯಾ ಮೋಲಿ ಫೆರ್ನಾಂಡೀಸ್, ಅಧ್ಯಕ್ಷೆ ವೇದಾ ಸುವರ್ಣ, ಕಾರ್ಯದರ್ಶಿ ಲತಾ ವಾದಿರಾಜ್, ವಿವಿಧ ವಲಯಗಳ ಸಂಘಗಳ ಪದಾ„ಕಾರಗಳು, ಸದಸ್ಯರು ಉಪಸ್ಥಿತರಿದ್ದರು.  ಸುಜಾತ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿಗಳಾದ ಜ್ಯೋತಿ ಹಾಗೂ ಕಿಶ್ವರ್ ವರದಿ ವಾಚಿಸಿದರು.