ಕಾರ್ಕಳ: ತಾಲೂಕಿನ ಬೈಲೂರು ಕೆಳಪೇಟೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಘೋರಿಯೊಂದು ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾಗಿದ್ದು ಘೋರಿಯನ್ನು ಸ್ಥಳೀಯ ಪಂಚಾಯತ್ ಪಿಡಿಒ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸರ ನೇತ್ರತ್ವದಲ್ಲಿ ತೆರವು ಮಾಡಲಾಗಿದೆ.
ಶಾಂತಿ ಕದಡುವ ಯತ್ನ:ಆರೋಪ : ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ದರ್ಗಾ ಇತ್ತು. ಕಳೆದ 5 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದನ್ನು ತೆರವು ಮಾಡಲಾಗಿತ್ತು. ಆದರೆ ಮಂಗಳವಾರ ರಾತ್ರಿ ಮತ್ತೆ ಅಲ್ಲಿ ಘೋರಿ ತಂದು ಇಡಲಾಗಿದೆ.
ಸ್ಥಳಕ್ಕೆ ಜಿ.ಪಂ. ಸದಸ್ಯ ಸುಮಿತ್ ಬೈಲೂರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ನೀಡಿದ್ದು, ಇದು ಬೈಲೂರು ಭಾಗದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಕಾರ್ಕಳದ ಬೈಲೂರಿನಲ್ಲಿ ಘೋರಿ ಪ್ರತ್ಯಕ್ಷ, ಶಾಂತಿ ಕದಡುವ ಯತ್ನ?
 
								 
															





 
															 
															 
															











