ಬೈಲೂರು: ಭಾರತ್ ಮಾತಾ ಪೂಜನಾ ಕಾರ್ಯಕ್ರಮ

ಬೈಲೂರು: ಹಿಂದೂ ಜಾಗರಣ ವೇದಿಕೆ ಬೈಲೂರು ವಲಯ ಕೌಡೂರು ಗ್ರಾಮ, ಜೈ ಹನುಮಾನ್ ಘಟಕ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮವನ್ನು ಅ.5 ರಂದು ಕೌಡೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾದ ಬಿಂದು ಮಾಧವ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭ ತಾಯಿ ಭಾರತಿ ಹಾಗೂ ಅಯೋಧ್ಯಾ ಪತಿ ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹಿಂ.ಜಾ.ವೇ. ಜಿಲ್ಲಾ ಕಾರ್ಯದರ್ಶಿ ಮಹೇಶ್ ಬೈಲೂರು, ಹಿಂ.ಜಾ.ವೆ. ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ತಾಲೂಕು ಕಾರ್ಯದರ್ಶಿ ಗುರುಪ್ರಸಾದ್  ಶೆಟ್ಟಿ ನಾರಾವಿ, ವಲಯ ಅಧ್ಯಕ್ಷರಾದ ಸುರೇಶ್ ಸಾಲಿಯಾನ್ ಘಟಕದ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಮ ತಾರಕ ಮಂತ್ರ ವನ್ನು ಪಠಿಸಲಾಯಿತು.