ಈ ನಟಿ ನೋಡೋಕೆ ಸಿಂಪಲ್, ಆದ್ರೆ ಈಕೆ ಬಳಸೋ ಬ್ಯಾಗ್ ಬೆಲೆಗೆ ದುಬಾರಿ ಮನೆಯನ್ನೇ ಕೊಳ್ಳಬಹುದು!

ಖ್ಯಾತ ನಟಿ ನಯನತಾರಾ  ಐಷಾರಾಮಿ ಜೀನವಶೈಲಿಯ ಜೊತೆ ಆಗಾಗ ಸುದ್ದಿಯಾಗುತ್ತಾರೆ. ನಟಿ ಐಷಾರಾಮಿ ಕಾರುಗಳ ಸಂಗ್ರಹದ ಜೊತೆಗೆ ಅವರು ಖಾಸಗಿ ಜೆಟ್ ಕೂಡ ಹೊಂದಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಈಗ ಅವರು ಬಳಸುವ ಹ್ಯಾಂಡ್ ಬ್ಯಾಗ್ ಅತ್ಯಂತ ಬೆಳೆಬಾಳುತ್ತೆ ಎನ್ನುವ ವರದಿಯಾಗಿದೆ. ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್‌ಗಳ ಸಂಗ್ರಹ ಕೂಡ ಅವರಲ್ಲಿದೆಯಂತೆ.

ನಯನತಾರಾ ಬಳಿ ಪ್ರಾಡಾ ಎಂಬ ಅಂತರರಾಷ್ಟ್ರೀಯ ಬ್ರ್ಯಾಂಡ್‌ನ ಬ್ಯಾಗ್ ಕೂಡ ಇದ್ದು, ಈ ಸಣ್ಣ ಹ್ಯಾಂಡ್‌ಬ್ಯಾಗ್‌ನ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿ.  ಪುಟ್ಟದ್ದೊಂದು ಬ್ಯಾಗ್ ಗೆ ಇಷ್ಟು ಸುರಿದು ಬ್ಯಾಗ್ ಗಳನ್ನು ಸಂಗ್ರಹಿಸುತ್ತಾರಂತೆ ಈ ನಟಿ. ನಯನತಾರಾ ಹ್ಯಾಂಡ್‌ಬ್ಯಾಗ್‌ಗಳು, ಮೇಕಪ್ ಉತ್ಪನ್ನಗಳು ಇತ್ಯಾದಿಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಐಷಾರಾಮಿ ಹ್ಯಾಂಡ್‌ಬ್ಯಾಗ್‌ಗಳನ್ನು ಸಾಮಾನ್ಯವಾಗಿ ಹೆಚ್ಚಿನ ನಟಿಯರು ಇಷ್ಟಪಡುತ್ತಾರೆ.   ಸದ್ಯ  ಈ ನಟಿಯ ರೆಡ್‌ ಪ್ರಾಡಾ ಬ್ಯಾಗ್  ಸುದ್ದಿಯಲ್ಲಿದ್ದು, ಒಂದು ಬ್ಯಾಗ್‌ನ ಬೆಲೆಯೇ ಇಷ್ಟಿದ್ದರೆ, ನಟಿಯ ಬಳಿ ಸಾಕಷ್ಟು ಬ್ಯಾಗ್‌ಗಳಿವೆ ಇನ್ನೂ ಅವುಗಳ ಬೆಲೆ ಎಷ್ಟಿರಬಹುದು ಎಂದು ಅಭಿಮಾನಿಗಳು ಅಂದಾಜಿಸಲು ಆರಂಭಿಸಿದ್ದಾರೆ.  ಅವರ ಬ್ಯಾಗ್ ಖಯಾಲಿ ನೋಡಿ ಶಾಕ್ ಕೂಡ ಆಗಿದ್ದಾರೆ. 

ನಟಿ ನಯನತಾರಾ  ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ತಮ್ಮ ವೃತ್ತಿಪರ ಕಾರಣಗಳಿಂದ ಅಷ್ಟೇ ಅಲ್ಲದೆ ನಟಿ ನಯನತಾರಾ ತಮ್ಮ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ.  ಹಾಗೆ ಈಗ ಅವರು ಬಳಸುವ ದುಬಾರಿ ಬ್ಯಾಗ್ ಕೂಡ ಸುದ್ದಿಯಲ್ಲಿದೆ. ಅಂದ ಹಾಗೆ  ನಯನತಾರಾ, ₹183 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಎನ್ನುವ ವರದಿ ಇದೆ.  ದುಬಾರಿ ಕಾರು ಗಳು ಇದರಲ್ಲಿ ಸೇರಿವೆ