ಈ ಖ್ಯಾತ ಬಾಲಿವುಡ್ ನಟ, ಆ ನಟಿಯ ಬಾಯಿಯ ದುರ್ವಾಸನೆಗೆ ಬೇಸತ್ತಿದ್ದ:ಯಾಕೆ ಬರುತ್ತೆ ಬಾಯಿಯಲ್ಲಿ ಕೆಟ್ಟ ವಾಸನೆ

ಬಾಯಿಯಿಂದ ಬರುವ ವಾಸನೆ ಬಗ್ಗೆ ಮೊನ್ನೆ ಬಾಲಿವುಡ್ ನಟ ಬಾಬಿ ಡಿಯೋಲ್ ಸಂದರ್ಶನವೊಂದರಲ್ಲಿ ಹೇಳಿದ ಸಂಗತಿ ಈ ಬಾಯಿ ವಾಸನೆ ಹೇಗೆ ಬರುತ್ತದೆ ಎನ್ನುವ ಕುರಿತೇ ಯೋಚಿಸುವಂತೆ ಮಾಡಿತು. ಹೌದು ನಟ ಬಾಬಿ ಡಿಯೋಲ್ , 1997 ರಲ್ಲಿ ಬಿಡುಗಡೆಯಾದ ‘ಗುಪ್ತಾ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಾಯಕಿಯ ದುರ್ವಾಸನೆಯಿಂದ ಬೇಸತ್ತಿದ್ದೆ ಎಂದು ಹೇಳಿದ್ದರು. ಈ ಚಿತ್ರದಲ್ಲಿ ಬಾಬಿ ಮತ್ತು ಮನೀಷಾ ನಡುವೆ ಹಲವಾರು ಕ್ಲೋಸಪ್ ದೃಶ್ಯಗಳಿದ್ದವು. ಈ ದೃಶ್ಯವೊಂದರಲ್ಲಿ ಮನೀಷಾ ತನ್ನ ಮುಖವನ್ನು ಬಾಬಿಯ ಮುಖದ ಹತ್ತಿರ ತಂದು ಅವನ ಗಲ್ಲವನ್ನು ಕಚ್ಚುತ್ತಿರುವ ದೃಶ್ಯವಿತ್ತು. ಈ ಸಂದರ್ಭದಲ್ಲಿ ಬಾಬಿ ಡಿಯೋಲ್  ಕಷ್ಟಾಗುತ್ತಿತ್ತಂತೆ

ಮನೀಷಾ ಅವರ ಬಾಯಿಂದ ಆ ಸಂದರ್ಭದಲ್ಲಿ ಬರುತ್ತಿದ್ದ ದುರ್ವಾಸನೆಗೆ ಬಾಬಿ ಡಿಯೋಲ್ ಗೆ ಕಿರಿಕಿರಿಯಾಗುತ್ತಿತ್ತಂತೆ. ನೋಡಿ ಬಾಯಿಯ ದುರ್ವಾಸನೆ ಯಾರನ್ನೂ ಬಿಡಲ್ಲ.ತುಂಬಾ ಮಂದಿತ ಬಾಯಿಂದ ದುರ್ವಾಸನೆ ಬರುವುದನ್ನು ನೀಉ ಗಮನಿಸುತ್ತೀರಿ ಅಲ್ಲೇ. ಬನ್ನಿ ಬಾಯಿಯ ದುರ್ವಾಸನೆ ಯಾಕೆ ಬರುತ್ತದೆ?ಇದನ್ನು ಹೊಗಲಾಡಿಸೋದು ಹೇಗೆ ತಿಳಿದುಕೊಳ್ಳೋಣ.

ವಾಸನೆಗೆ ಕಾರಣವೇನು?

ಹ್ಯಾಲಿಟೋಸಿಸ್ ಎಂಬುದು ಬಾಯಿಯ ದುರ್ವಾಸನೆಗೆ ವೈದ್ಯಕೀಯ ಪದವಾಗಿದೆ. ಇದು ವಿವಿಧ ಅಂಶಗಳಿಂದ ಉಂಟಾಗಬಹುದು. ಕಳಪೆ ದಂತ ಆರೈಕೆ, ಕೆಲವು ಆಹಾರಗಳು, ಒಣ ಬಾಯಿ ಅಥವಾ ಇತರ ಆರೋಗ್ಯ ಸಮಸ್ಯೆಗಳು. ಸಾಂದರ್ಭಿಕವಾಗಿ ಬಾಯಿಯ ದುರ್ವಾಸನೆ ಸಾಮಾನ್ಯ, ಆದರೆ ಅದು ಮುಂದುವರಿದರೆ, ಅದು ಬಾಯಿಯ ಕುಳಿಯಲ್ಲಿನ ಸಮಸ್ಯೆ ಅಥವಾ ಹೆಚ್ಚು ಗಂಭೀರವಾದ ವೈದ್ಯಕೀಯ ಸಮಸ್ಯೆಗೆ ಕಾರಣವಾಗಬಹುದು.

ಹಲ್ಲು ಕುಳಿಗಳು, ಹಲ್ಲುಗಳ ನಡುವೆ ಸಿಲುಕಿಕೊಂಡಿರುವ ಆಹಾರ, ವಸಡಿನ ಸಮಸ್ಯೆಗಳು ಮತ್ತು ಬಾಯಿಯ ಸೋಂಕುಗಳು ಸೇರಿದಂತೆ ಹಲವಾರು ಅಂಶಗಳಿಂದ ದುರ್ವಾಸನೆ ಉಂಟಾಗಬಹುದು. ನೀವು ನಿಮ್ಮ ಹಲ್ಲುಗಳು, ಒಸಡುಗಳು ಮತ್ತು ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ನಿಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು ಮತ್ತು ನಿಮ್ಮ ಹಲ್ಲುಗಳ ಮೇಲೆ ತೆಳುವಾದ ಪ್ಲೇಕ್ ಪದರವು ರೂಪುಗೊಳ್ಳಬಹುದು. ಇದನ್ನು ಪ್ಲೇಕ್ ಎಂದು ಕರೆಯಲಾಗುತ್ತದೆ. ನೀವು ದಿನಕ್ಕೆ ಕನಿಷ್ಠ ಎರಡು ಬಾರಿ ಪ್ಲೇಕ್ ಅನ್ನು ಸ್ವಚ್ಛಗೊಳಿಸದಿದ್ದರೆ, ನಿಮಗೆ ದುರ್ವಾಸನೆ ಉಂಟಾಗುತ್ತದೆ

ದೇಹದಲ್ಲಿ ನೀರಿನ ಕೊರತೆ ಇದ್ದರೂ ಸಹ, ಬಾಯಿಯ ದುರ್ವಾಸನೆ ಬರಬಹುದು. ಅಷ್ಟೇ ಅಲ್ಲ, ಹೊಟ್ಟೆ ಮತ್ತು ಯಕೃತ್ತಿನ ಸಮಸ್ಯೆಗಳಿದ್ದರೂ ಸಹ, ಬಾಯಿಯ ದುರ್ವಾಸನೆ ಬರುತ್ತದೆ. ಅಲ್ಲದೆ, ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದರೆ, ಬಾಯಿಯಲ್ಲಿ ಕೊಳೆತ ವಾಸನೆ ಬರುತ್ತದೆ ಎಂದು ಅಧ್ಯಯನಗಳು ತೋರಿಸಿವೆ! ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 47 ಪ್ರತಿಶತ ಜನರು ಈ ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಈ ವಿಟಮಿನ್ ಕೊರತೆಯು ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಕಂಡುಬರುತ್ತದೆ, ಏಕೆಂದರೆ ಇದು ‘ಸಸ್ಯ ಆಧಾರಿತ ವಿಟಮಿನ್’ ಅಲ್ಲ.

ವಿಟಮಿನ್ ಬಿ 12 ಹೇಗೆ ಸಿಗುತ್ತೆ?

ನರ ಕೋಶಗಳು ಮತ್ತು ರಕ್ತ ಕಣಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಬಿ 12 ಅತ್ಯಗತ್ಯ. ಈ ವಿಟಮಿನ್ ಡಿಎನ್ಎ ಉತ್ಪಾದನೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹವು ವಿಟಮಿನ್ ಬಿ 12 ಅನ್ನು ಸ್ವಂತವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಈ ವಿಟಮಿನ್ ಅನ್ನು ಆಹಾರ ಮತ್ತು ಪಾನೀಯಗಳ ಮೂಲಕ ಸೇವಿಸಬೇಕು. ಮಾಂಸ, ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳು ಈ ವಿಟಮಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಕೆಲವು ಧಾನ್ಯಗಳು, ಬ್ರೆಡ್ ಮತ್ತು ಯೀಸ್ಟ್ ಕೂಡ ಈ ವಿಟಮಿನ್ ಅನ್ನು ಹೊಂದಿರುತ್ತವೆ.

ಸಸ್ಯಾಹಾರಿ ಆಹಾರಗಳಲ್ಲಿ ಈ ವಿಟಮಿನ್ ಸ್ವಲ್ಪ ಕಡಿಮೆ ಇರುತ್ತದೆ. ನಾನ್‌ವೆಜ್‌ನಲ್ಲಿ ಹೆಚ್ಚಿನ ವಿಟಮಿನ್ ಬಿ 12 ಇರುತ್ತದೆ. ಮೊಟ್ಟೆ, ಅಣಬೆಗಳು, ವಿವಿಧ ರೀತಿಯ ಮಾಂಸ ಮತ್ತು ಸಮುದ್ರ ಮೀನುಗಳಂತಹ ಆಹಾರಗಳು ವಿಟಮಿನ್ ಬಿ 12 ನ ಸಮೃದ್ಧ ಮೂಲಗಳಾಗಿವೆ. ಇದಲ್ಲದೆ, ಈ ವಿಟಮಿನ್ ಹಾಲು, ಮೊಸರು ಮತ್ತು ಕಡಲೆಗಳಲ್ಲಿಯೂ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ.

ಆರೋಗ್ಯವಾಗಿರಲು ದೇಹದಲ್ಲಿ ಸರಿಯಾದ ಪ್ರಮಾಣದ ವಿಟಮಿನ್ ಬಿ 12 ಇರುವುದು ಬಹಳ ಮುಖ್ಯ. ಈ ವಿಟಮಿನ್, ನರಗಳ ಆರೋಗ್ಯವನ್ನು ಕಾಪಾಡುತ್ತದೆ, ಅಲ್ಲದೇ ಕ್ರಮೇಣಆಗಿ ಇದರಿಂದ ಬಾಯಿಯ ದುರ್ವಾಸನೆಯೂ ಕಡಿಮೆಯಾಗುತ್ತದೆ.