ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಹೆಚ್.ಡಿ ತಮ್ಮಯ್ಯ ಅವರ ಅಭಿಮಾನಿಗಳು ಫೆ.21 ರಂದು ಮಂಗಳವಾರದಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ “ಬದಲಾವಣೆ ಸಂಕಲ್ಪ ಯಾತ್ರೆ” ಬೃಹತ್ ಬೈಕ್ ರ್ಯಾಲಿ ಏರ್ಪಡಿಸಿದ್ದು, ಬೆಳಗ್ಗೆ 11.30 ಕ್ಕೆ ಕರ್ತಿಕೆರೆ ಯಿಂದ ಹೊರಟು ಬೇಲೂರು ರಸ್ತೆ, ಐ.ಜಿ ರಸ್ತೆ, ಎಂ.ಜಿ ರಸ್ತೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಛೇರಿಯನ್ನು ತಲುಪಲಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಹೆಚ್.ಡಿ ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












