ವಿಶ್ವದಾದ್ಯಂತ ತಮ್ಮ ಭವಿಷ್ಯವಾಣಿಯ ಮೂಲಕ ಇವರು ಈ ಹಿಂದೆ ಸಂಕಲನ ಮೂಡಿಸಿದ್ದರು, ಹೇಳಿದ್ದ ಬಹುತೇಕ ಭವಿಷ್ಯವಾಣಿಗಳೆಲ್ಲಾ ನಿಜವಾದಾಗ ಇಡೀ ಜಗತ್ತೇ ಇವರ ಭವಿಷ್ಯವಾಣಿಯತ್ತ ತಿರುಗಿ ನೋಡಿದ್ದರು. ಹೌದು ಅವರೇ ಬಾಬಾ ವಂಗಾ. ಇವರು ಈವರೆಗೆ ಎರಡನೆಯ ಮಹಾಯುದ್ದದಿಂದ ಹಿಡಿದು, ಅಮೇರಿಕಾ ಮೇಲಿನ ದಾಳಿ ಮತ್ತು ಇಂದಿರಾಗಾಂಧಿ ಸಾವಿನವರೆಗೆ ಹೇಳಿದ್ದ ಭವಿಷ್ಯವೆಲ್ಲಾ ನಿಜವಾಗಿದ್ದು. ಇದೀಗ ಬಾಬಾ ವಂಗಾ ಸಾಯುವ ಮುನ್ನ ಹೇಳಿದ್ದ ಭವಿಷ್ಯವಾಣಿಯ ಕುರಿತು ಚರ್ಚೆ ಶುರುವಾಗಿದೆ.
ಮುಂದೊಂದು ದಿನ ಭಾರತ-ಪಾಕ್ ಯುದ್ಧ ನಡೆಯಲಿದೆ ಈ ಯುದ್ಧದಲ್ಲಿಇಸ್ಲಾಮಿಕ್ ದೇಶದ ನಾಶ ಖಚಿತ ಎನ್ನುವ ಭವಿಷ್ಯವಾಣಿಯನ್ನು ಹೇಳಿದ್ದರು ವಂಗಾ. ಪಾಕಿಸ್ತಾನದ ನಾಶದ ಕುರಿತೂ ಪ್ರಸ್ತಾಪಿಸಿದ್ದರು. ಈಗ ಕಾಶ್ಮೀರ ಪಹಲ್ಗಾಮ್ ದಾಳಿಯ ನಂತರ ಇವರ ಭವಿಷ್ಯವಾಣಿ ನಿಜವಾಗುವ ದಿನಗಳು ಹತ್ತಿರ ಬಂದಿದೆಯಾ ಎನ್ನವ ಕುರಿತು ಪಾಕ್ ಗೂ ನಡುಕ ಶುರುವಾಗಿರುವುದು ಹೌದು.
ಬಾಬಾ ವಂಗಾ ಈ ವರೆಗೆ ಹೇಳಿದ ಪ್ರಾಕೃತಿಕ ದುರಂತ ಸೇರಿದಂತೆ ರಾಜಕಾರಣಿಗಳ ಸಾವು, ಜಗತ್ತಿಗೆ ಆಗುವ ನಷ್ಟದ ಕುರಿತ ಭವಿಷ್ಯವಾಣಿಗಳೆಲ್ಲಾ ನಿಜವಾಗಿರುವುದರಿಂದ ಇದೀಗ ಇಸ್ಲಾಮಿಕ್ ರಾಷ್ಟ್ರಗಳ ನಾಶದ ಕುರಿತ ಅವರ ಭವಿಷ್ಯವಾಣಿ ಚರ್ಚೆಯ ವಸ್ತುವಾಗಿದೆ. ಭವಿಷ್ಯವಾಣಿ ನಿಜವಾಗುತ್ತ ಎನ್ನುವುದನ್ನು ಜಗತ್ತು ಕಾದು ನೋಡುತ್ತಿದೆ.












