ಕಾಪು: ಮಹಾಯಾಗದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಉಡುಪಿ : ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಉಡುಪಿ ಜಿಲ್ಲೆಯ ಕಾಪು ತಾಲೂಕು ಎಲ್ಲೂರು ಸೀಮೆಯ ಕುತ್ಯಾರು ವಿದ್ಯಾದಾಯಿನಿ ಶಾಲಾ ಪ್ರಾಂಗಣದಲ್ಲಿ ಲೋಕ ಕಲ್ಯಾಣಾರ್ಥ ಆಯೋಜಿಸಿದ್ದ, ಸಹಸ್ರಮಾನ ನವಕುಂಡ ಶ್ರೀ ಮಹಾಗಣಪತಿ ಅಥರ್ವ ಶೀರ್ಷ ಮಹಾಯಾಗ- ಮಹಾ ಅನ್ನ ಸಂತರ್ಪಣೆ, ಸನಾತನ ಧರ್ಮಸಂಸತ್ತು- ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಇಂದು ಭಾಗವಹಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನಾಡಿನ ಜನರ ಕಷ್ಟ ಕಾರ್ಪಣ್ಯ , ಪ್ರಕೃತಿ ವಿಕೋಪ ನಿವಾರಣೆ, ಮಳೆ ಬೆಳೆ ತನ್ಮೂಲಕ ಲೋಕ ಸುಭಿಕ್ಷೆಯ ಆಶಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸುತ್ತಾ, ದೇವರನ್ನು ನಂಬಿ ಸನ್ಮಾರ್ಗದಲ್ಲಿ ನಡೆಯುವ ಯಾರೊಬ್ಬರಿಗೂ ಕೆಡುಕು ಆಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಹಾಗೂ ಸಹಕಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಮುಜರಾಯಿ ಮತ್ತು ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹಾಗೂ ವಿವಿಧ ಜನಪ್ರತಿನಿಧಿಗಳು ಹಾಗೂ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.