ಕುಂದಾಪುರ (ಸೆ.10): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ
ಆಡಳಿತ ವಿಭಾಗ ಹಾಗೂ ರೋವರ್ಸ್ & ರೇಂಜರ್ಸ್ ಘಟಕದ ಜಂಟಿ ಆಶ್ರಯದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ರಚನೆಯ ಸ್ಪರ್ಧೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್, 10 ರಂದು ಕಾಲೇಜಿನ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಅತಿಯಾದ ರಾಸಾಯನಿಕ ಬಳಕೆ ಹಾಗೂ ಕೃತಕ ವಸ್ತುಗಳನ್ನು ಬಳಸಿ ಗಣಪತಿ ಮೂರ್ತಿಯನ್ನು ರಚಿಸುವುದು ಪರಿಸರಕ್ಕೆ ಹಾನಿಕಾರಕ ಆ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿಯನ್ನು ರಚಿಸುವುದು ಉತ್ತಮ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಹೇಳಿದರು.
ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ, ರೋವರ್ಸ್ ಸೈಟ್ ಲೀಡರ್ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಹಾಗೂ ರೇಂಜರ್ಸ್ ಲೀಡರ್ ಶ್ರೀಮತಿ ರೇವತಿ ಡಿ. ರೋವರ್ಸ್ ಮತ್ತು ರೇಂಜರ್ಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಸಮೀಕ್ಷಾ ತೃತೀಯ ಬಿ.ಸಿ.ಎ. (ಎ) ಪ್ರಥಮ ಸ್ಥಾನ, ಸೋಹನ್ ಪ್ರಥಮ
ಬಿ.ಸಿ.ಎ. (ಸಿ) ದ್ವಿತೀಯ ಸ್ಥಾನ, ಸಾತ್ವಿಕ್ ಕೆ., ಸೌಜನ್ಯ ತೃತೀಯ ಬಿ.ಸಿ.ಎ. (ಬಿ) ತೃತೀಯ ಸ್ಥಾನ
ಪಡೆದಿದ್ದಾರೆ.















