ಅಯ್ಯಪ್ಪ ಸ್ವಾಮಿಯ ಕುರಿತು ನೂರಾರು ಪವಾಡದ ಕತೆಗಳು ನಮ್ಮ ಸುತ್ತಮುತ್ತ ಓಡಾಡುತ್ತಲೇ ಇದೆ. ಒಂದು ಶಬ್ದ ಕೂಡ ಮಾತನಾಡಲು ಬಾರದ ಪುತ್ತೂರಿನ ಯುವಕನೊಬ್ಬನಿಗೆ ಇದೀಗ ಮಾತು ಬಂದಿದೆ ! ಅದೂ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಎನ್ನುವ ಸುದ್ದಿ ಈಗ ಸದ್ದು ಮಾಡಿದೆ. ಹೌದು ಹುಟ್ಟು ಮಾತು ಬರದ ಇದೀಗ ಶಬರಿಮಲೆ ಏರಲು ಮಾಲೆ ಹಾಕಿರುವ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಈ ಘಟನೆ ದೊಡ್ಡದ್ದೊಂದು ಅಚ್ಚರಿಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಿ ಈ ಪ್ರಸನ್ನ.ಅಂದ ಹಾಗೆ ಪ್ರಸನ್ನ, ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿ ಬಂದಿದ್ದ. ಕಾಡಿನ ಹಾದಿಯಲ್ಲಿ ದರ್ಶನ ಪಡೆದಿದ್ದ. ಆ ಬಳಿಕ ಇದೀಗ ಮಾತಾಡಲು ಶುರುಮಾಡಿದ್ದಾನಂತೆ. ಇಂದು ಅಯ್ಯಪ್ಪ ಸ್ವಾಮಿಯ ಶರಣು ಎನ್ನುವುದಕ್ಕೂ ಇವನಿಗೆ ಸಾಧ್ಯವಾಗುತ್ತಿದೆಯಂತೆ .ಮಾತು ಸ್ವಲ್ಪ ಅಸ್ಪಷ್ಟವಾಗಿದ್ದರೂ ಅರ್ಥವಾಗುವಂತಿದೆಯಂತೆ . ಈಗ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಮಲೆ ಏರಲು ತಯಾರಾಗಿದ್ದಾನೆ ಈ ಹುಡುಗ. ಈ ಬಾರಿಯೂ ಹೋದರೆ ಇನ್ನಷ್ಟು ಸ್ಪಷ್ಟವಾಗಿ ಮಾತನಾಡಬಹುದಾದ ನಿರೀಕ್ಷೆಯಲ್ಲಿ ಅವರ ಹಿರಿಯ ಸ್ವಾಮಿಗಳಿದ್ದಾರಂತೆ.
ಅಂದ ಹಾಗೆ ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ನಲ್ಲಿ ಪ್ರಸನ್ನ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಓದುತ್ತಿದ್ದಾರೆ. ಏನೂ ಮಾತನಾಡದೇ ಇದ್ದ ಈ ಹುಡುಗ ಇದೀಗ ಒಂದಷ್ಟು ಮಾತಾಡುತ್ತಿರುವುದು ಮತ್ತು ಕಿವಿಯೂ ಇವರಿಗೆ ಸ್ಪಷ್ಟವಾಗಿ ಕೇಳಿಸುತ್ತಿರುವುದು ಅಯ್ಯಪ್ಪ ಸ್ವಾಮಿಯ ಮಹಿಮೆಯೇ ಎಂದಿದ್ದಾರಂತೆ ಅವರ ಹಿರಿಯ ಸ್ವಾಮೀಗಳು












