ಉಡುಪಿ: ರಾಮಮಂದಿರ ಭೂಮಿಪೂಜೆಯ ಪ್ರಯುಕ್ತ ಪಲಿಮಾರು ಮಠ ವಿದ್ಯಾಧೀಶತೀರ್ಥ ಸ್ವಾಮೀಜಿ ಇಂದು ವಿಶೇಷ ಪೂಜೆ ನೆರವೇರಿಸಿದರು. ಭಕ್ತಾಧಿಗಳಿಂದ ಭಜನೆ, ಪಾರಾಯಣ ನಡೆಯಿತು.
ಬಳಿಕ ಶ್ರೀಗಳು ಮಾತನಾಡಿ, ಯೋಧ್ಯೆಯಲ್ಲಿ ವಿವಾದಿತ ಕುಂಭವನ್ನು ಬೀಳಿಸಿದ ನಂತರ ಭಾರತೀಯರೆಲ್ಲರು ನಡೆಸಿದ ಅಖಂಡ ಭಜನೆ, ಪ್ರಾರ್ಥನೆ, ವಿವಿಧ ಪೂಜೆಗಳಿಂದಾಗಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿದೆ. ಸಾಮೂಹಿಕ ಪ್ರಾರ್ಥನೆಯ ಫಲ ನಮಗೆ ಸಿಕ್ಕಿದೆ ಎಂದರು.