ಉಡುಪಿ: ಅಯೋಧ್ಯಾ ರಾಮಮಂದಿರ ಸಂಕೀರ್ಣದಲ್ಲಿ ರಾಮಲಲ್ಲಾ ದರ್ಬಾರ್ ಉದ್ಘಾಟನೆಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
ಈ ವೇಳೆ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ರಾಮದರ್ಬಾರ್ ನ ವಿಗ್ರಹಗಳಿಗೆ ದರ್ಬೆಯ ಮೂಲಕ ಪ್ರಾಣ ಪ್ರತಿಷ್ಠೆಯನ್ನು ಮಾಡಿದರು . ಬಳಿಕ ವಿಶೇಷ ಆರತಿ ಬೆಳಗಲಾಯಿತು. ಜನ್ಮಭೂಮಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ , ಟ್ರಸ್ಟ್ ಸದಸ್ಯರು ವೈದಿಕರು ಉಪಸ್ಥಿತರಿದ್ದರು.












