ಕುಂದಾಪುರ: ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಮತ್ತು ಸೇವಾ ಭಾರತಿ ಇವರ ವತಿಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕುಂದಾಪುರ ತಾಲೂಕು ಆರೋಗ್ಯ ಕೇಂದ್ರದಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಕಾರ್ಯಾಗಾರವು ಸೆ. 01 ರಂದು ನಡೆಯಿತು.
ದಿವ್ಯಾಂಗ ರಕ್ಷಣಾ ಸಮಿತಿಯ ಮ್ಯಾನೇಜರ್ ಅಖಿಲೇಶ್ ಎ. ಬೆನ್ನುಹುರಿ ಅಪಘಾತದ ಕಾರಣ, ಪರಿಣಾಮ ಹಾಗೂ ದ್ವಿತಿಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಶ್ರೀಮತಿ ಶೋಭಾ, ಡಾ. ಅಂಜಲಿ, ಸೇವಾ ಭಾರತಿಯ ಕ್ಷೇತ್ರ ಸಂಯೋಜಕ ಶಶಾಂತ್ ಉಪಸ್ಥಿತರಿದ್ದರು.
ಒಟ್ಟು 80 ಮಂದಿ ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.












