ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ
ರೆಡ್‌ಕ್ರಾಸ್ ಘಟಕವು ನಿರಾಮಯ ನರ್ಸಿಂಗ್ ಕಾಲೇಜು ಮತ್ತು ಅಲೈಡ್
ಹೆಲ್ತ್ ಸೈನ್ಸ್ನ ಸಹಯೊಗದೊಂದಿಗೆ ದಿನಾಂಕ ೧೨ ಡಿಸೆಂಬರ್ ೨೦೨೫
ರಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು
ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಉಡುಪಿ, ಇದರ ಸಂಯೋಜಕರಾದ ಮಹಾಬಲೇಶ್ವರ ಬಿ ಎಂ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಇವರು ತಮ್ಮ ಭಾಷಣದಲ್ಲಿ ಏಡ್ಸ್ ತಡೆಗಟ್ಟುವಿಕೆ, ಚಿಕಿತ್ಸೆ, ನಿರ್ವಹಣೆ ಮತ್ತು ರೋಗದ ಬಗ್ಗೆ ಇರುವ ತಪ್ಪು ಕಲ್ಪನೆ ಕುರಿತು ಅಮೂಲ್ಯವಾದ ಮಾಹಿತಿ ನೀಡಿದರು.

ಈ ಕಾರ್ಯಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು, ಸದಸ್ಯರು, ನಿರಾಮಯ ನರ್ಸಿಂಗ್ ಕಾಲೇಜು ಮತ್ತು ಅಲೈಡ್ ಹೆಲ್ತ್ ಸೈನ್ಸ್ನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.