ಕುಂದಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ವತಿಯಿಂದ ತಂಬಾಕು ಮುಕ್ತ ಸಮಾಜ ಕುರಿತು ಜಾಗೃತಿ ಜಾಥಾ

ಕುಂದಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ಆವರ್ಸೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಿಲಿಯಾಣ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ವಂಡಾರು, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಿಲ್ಲಾಡಿ, ಸರ್ಕಾರಿ ಪ್ರೌಢಶಾಲೆ ಗೋಳಿಯಂಗಡಿ ಇವರುಗಳ ಜಂಟಿ ಸಹಯೋಗದೊಂದಿಗೆ ಜೂನ್ 07 ರಂದು ತಂಬಾಕು ಮುಕ್ತ ಸಮಾಜ ಕುರಿತು ಜಾಗೃತಿ ಜಾಥಾವನ್ನು ಗೋಳಿಯಂಗಡಿ ಪ್ರೌಢಶಾಲೆ ಆವರಣದಿಂದ ಗೋಳಿಯಂಗಡಿ ಪೇಟೆಯವರೆಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗೋಳಿಯಂಗಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಶ್ವ ಆರೋಗ್ಯ ಸಂಸ್ಥೆಯ “ತಂಬಾಕು ಬೇಡ ಆಹಾರ ಬೇಕು ತಂಬಾಕು ತ್ಯಜಿಸಿ ಜೀವ ಉಳಿಸಿ” ಎನ್ನುವ ಘೋಷವಾಕ್ಯವನ್ನು ಕೂಗಿದರು.

ತಂಬಾಕು ಸೇವನೆ ವಿರುದ್ಧ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ವಿಜೇಂದ್ರ, ಆಶಿಶ್, ಕುಮಾರಿ ಸುಶ್ಮಿತಾ ಹಾಗೂ ಪಿ ಹೆಚ್ ಸಿ ಓ, ಸರ್ಕಾರಿ ಪ್ರೌಢಶಾಲೆ ಗೋಳಿಯಂಗಡಿಯ ಮುಖ್ಯ ಶಿಕ್ಷಕ ನಾಗರಾಜ್, ಶಿಕ್ಷಕ ರಾಘವೇಂದ್ರ, ಸಹ ಶಿಕ್ಷಕರುಗಳಾದ ಶ್ರೀಮತಿ ವೀಣಾ , ಶ್ರೀಮತಿ ಸುಭಿಕ್ಷಾ, ಶ್ರೀಮತಿ ರೋಮಿಳ, ದೈಹಿಕ ಶಿಕ್ಷಕರಾದ ಶ್ರೀಮತಿ ಜಯಲಕ್ಷ್ಮಿ ಹಾಗೂ ಹಿಲಿಯಾಣ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗವಹಿಸಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷರುಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಗೂಡಿ ಸ್ಥಳೀಯ ಅಂಗಡಿಗಳಿಗೆ ಭೇಟಿ ನೀಡಿ ಗುಲಾಬಿ ಹೂವನ್ನು ನೀಡುವ ಮೂಲಕ ತಂಬಾಕು ಮಾರಾಟ ಮಾಡದಂತೆ, ತಂಬಾಕಿನ ಕುರಿತು ಅರಿವು ಮೂಡಿಸಲಾಯಿತು.