ಉಡುಪಿ: ವಿಶ್ವ ಮಧುಮೇಹ ದಿನಾಚರಣೆಯ ಹಾಗೂ ರಾಷ್ಟ್ರೀಯ ಅಂಗಾಗ ದಾನ ದಿನಾಚಣೆಯ ಅಂಗವಾಗಿ ಭಾನುವಾರದಂದು ಐ.ಎಮ್.ಎ ಉಡುಪಿ ಕರಾವಳಿ ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ ಜಂಟಿ ಸಹಯೋಗದಲ್ಲಿ ಜನಸಾಮಾನ್ಯರಿಗೆ ಮಧುಮೇಹ ಮತ್ತು ಅಂಗಾಗದಾನದ ಬಗ್ಗೆ ಮಾಹಿತಿ ಮತ್ತು ತಪಾಸಣಾ ಶಿಬಿರವನ್ನು ಐ.ಎಮ್.ಎ ಭವನ ಉಡುಪಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಅಶೋಕ್ ಕುಮಾರ್ ವೈಜಿ ಇವರು ಉಧ್ಘಾಟಿಸಿ ಮಧುಮೇಹದ ಶೀಘ್ರ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು.
ಬ್ರಹ್ಮಗಿರಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲಯನ್ ಉಮೇಶ್ ನಾಯಕ್, ಜಿಲ್ಲಾ ದೃಷ್ಠಿ ರಕ್ಷಣಾ ಕೇಂದ್ರದ ಅಧ್ಯಕ್ಷ ಲೈಯನ್ ವಾದಿರಾಜ್ ರಾವ್ ಮುಖ್ಯ ಅಥಿತಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಮ್.ಎ ಉಪಾಧ್ಯಕ್ಷೆ ಡಾ.ರಾಜಲಕ್ಷ್ಮೀ ಇವರು ವಹಿಸಿ, ಸ್ವಾಗತಿಸಿ, ವಂದಿಸಿದರು.
ಕೆ.ಎಮ್.ಸಿ ಮಣಿಪಾಲದ ವೈದ್ಯರಾದ ಡಾ.ಗಿರೀಶ್ ಮೆನನ್ ನರರೋಗ ಮತ್ತು ಡಾ. ಸುಲತಾ ಭಂಡಾರಿ ಅಂಗಾಗ ದಾನದ ಮಹತ್ವದ ಬಗ್ಗೆ ವಿವರಿಸಿದರು.
ಡಾ.ಶ್ರುತಿ ಬಲ್ಲಾಳ್, ಡಾ.ಸತೀಶ್ ನಾಯಕ್, ಡಾ.ವಿಜಯ್ ಶೇಟ್, ಡಾ.ಅರ್ಜುನ್ ಬಲ್ಲಾಳ್, ಡಾ.ಮಾನಸ್, ಡಾ.ಸ್ನೇಹ ಆಚಾರ್ಯ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.