ಮುಖದ ಮೇಲೆ ಕೂದಲು ಬೆಳೆದ್ರೆ ಮುಜುಗರ ಆಗುತ್ತೆ ಎನ್ನುವ ಹೆಣ್ಣು ಮಕ್ಕಳೇ ಒಮ್ಮೆ ಓದಿ

ಮುಖದ ಮೇಲೆ ಕೂದಲು ಬಂದರೆ ಹೆಣ್ಣು ಮಕ್ಕಳಿಗೆ ತುಂಬಾ ಮುಜುಗರ ಉಂಟಾಗುವುದು. ತೆಳುವಾದ ಕೂದಲು ಹೆಚ್ಚಿನವರ ಮುಖದಲ್ಲಿ ಕಂಡು ಬರುತ್ತದೆ, ಆದರೆ ಕೂದಲು ಸ್ವಲ್ಪ ತೆಳ್ಳಗೆ ಆಗಿದ್ದು, ಗಲ್ಲ ಮತ್ತು ಮೂಗಿನ ಕೆಳಗೆ ಕೂದಲು ಎದ್ದು ಕಾಣುವಂತಿದ್ದರೆ ತುಂಬಾ ಮುಜುಗರ ಉಂಟಾಗುತ್ತದೆ, ಯಾವ ಮೇಕಪ್ ನಿಂದಲೂ ಮುಖದಲ್ಲಿರುವ ಕೂದಲನ್ನು ಮರೆಮಾಚಲು ಆಗುವುದಿಲ್ಲ. ಸ್ತ್ರೀಯರ ಮುಖದಲ್ಲಿ ಬೇಡದ ಕೂದಲು ಇಲ್ಲದಿದ್ದರೆ ಮಾತ್ರ ಆಕರ್ಷಕವಾಗಿ ಕಾಣುವುದು. ಇದಕ್ಕೆ ನಾವು ಏನು ಮಾಡಬಹುದು ಎನ್ನುವ ಕುರಿತು             ರಮಿತಾ ಶೈಲೇಂದ್ರ ರಾವ್ ಕಾರ್ಕಳ ಬರೆದಿದ್ದಾರೆ 

ಹಾರ್ಮೋನ್ ವ್ಯತ್ಯಾಸ
ಹೆಣ್ಣು ಮಕ್ಕಳ ಮುಖದಲ್ಲಿ ಬೇಡದ ಕೂದಲು ಹಾರ್ಮೋನ್ ಗಳ ವ್ಯತ್ಯಾಸದಿಂದ ಉಂಟಾಗುತ್ತದೆ. ಹೆಣ್ಣು ಮಕ್ಕಳ ದೇಹದಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಅಧಿಕವಿದ್ದರೆ ಬೇಡದ ಕೂದಲು ಹೆಚ್ಚಾಗಿ ಕಂಡು ಬರುವುದು. ಕೂದಲು ಬರುವುದನ್ನು ತಡೆಯಲು ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಿಸಬೇಕು. ವ್ಯಾಯಾಮ ಮಾಡಿದರೆ ಹಾರ್ಮೋನ್ ಗಳನ್ನು ಸಮತೋಲನದಲ್ಲಿಡಬಹುದು.

ಆಹಾರಕ್ರಮ
ಈಸ್ಟ್ರೋಜನ್ ಹೆಚ್ಚಿಸುವ ಆಹಾರಗಳನ್ನು ತಿನ್ನಿ. ಸೋಯಾಬೀನ್ , ಟೊಮೆಟೊ, ಕಡಲೆ, ದಾಳಿಂಬೆ, ಆಲೂಗಡ್ಡೆ, ಜೀರಿಗೆ, ಸೋಂಪು, ಪ್ಲಮ್, ಬೀನ್ಸ್, ಸೂರ್ಯಕಾಂತಿ ಎಣ್ಣೆ ಮತ್ತು ಬೀಜ, ಅಗಸೆ ಬೀಜ ಇವೆಲ್ಲಾ ಈಸ್ಟ್ರೋಜನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಬೇರೆ ಬೇರೆ ರೀತಿಯ ಸ್ಕ್ರಬ್ ಗಳಿಂದ
ಫಿಸಿಕಲ್ ಎಕ್ಸ್ ಫೋಲಿಯೆ೦ಗಳಾದ ಫೇಶಿಯಲ್ ಸ್ಕ್ರಬ್‌ಗಳು ಅಥವಾ ರಾಸಾಯನಿಕಗಳಾದ ಗ್ಲೈಕೋಲಿಕ್ ಸೆರಮ್‌ಗಳನ್ನು ಉಪಯೋಗಿಸಬಹುದು. ಇದು ನಿಮ್ಮ ಒಣ ಚರ್ಮವನ್ನು ಸ್ಕ್ರಬ್ ಮಾಡಿ ಬ್ಲ್ಯಾಕ್ ಹೆಡ್ಸ್ ಉಂಟಾಗುವುದನ್ನು ತಡೆಯುತ್ತದೆ. ಜೊತೆಗೆ ಸುಂದರ ತ್ವಚೆ ನಿಮ್ಮದಾಗುತ್ತದೆ.

ಅರಶಿನ


ನಿಂಬೆ ರಸಕ್ಕೆ ಸ್ವಲ್ಪ ಅರಿಶಿಣ ಮಿಕ್ಸ್ ಮಾಡಿ ಪ್ರತೀದಿನ ಹಚ್ಚುತ್ತಾ ಬಂದರೆ ಬೇಡದ ಕೂದಲು ನಿಧಾನಕ್ಕೆ ಮಾಯವಾಗುವುದು, ಅಲ್ಲದೆ ಈ ವಿಧಾನದಲ್ಲಿ ಕೂದಲು ಹೋಗಲು ಸ್ವಲ್ಪ ಸಮಯ ತೆಗೆದುಕೊಳ್ಳುವುದಾದರು, ಪುನಃ ಹುಟ್ಟುವುದಿಲ್ಲ. ನುಣಪಾದ ತ್ವಚೆ ನಿಮ್ಮದಾಗುವುದು.

ಸ್ಟೀಮ್ ಸೆಶನ್‌ ಮಾಡಿಸಿಕೊಳ್ಳಿ
ನಿಮ್ಮ ಚರ್ಮದಲ್ಲಿರುವ ಅಶುದ್ಧತೆಯನ್ನು ಸ್ಟೀಮಿನ ಮೂಲಕ ನಿರ್ಮೂಲನೆಗೊಳಿಸಿ. ಇದು ಮುಖದಲ್ಲಿನ ಮುಚ್ಚಿನ ಪೊರೆಯನ್ನು ತೆರೆದು ಕಲ್ಮಶವನ್ನು ದೂರ ಮಾಡುತ್ತದೆ. ಇದರಿಂದ ಕೂದಲು ಬೆಳೆಯುವುದನ್ನು ತಡೆಯಬಹುದು.

ಸುಲಭವಾದ ಆದರೆ ದುಬಾರಿಯಾದ ವಿಧಾನ
ಎಲೆಕ್ಟ್ರೋಲಿಸಿಸ್ (Electrolysis) ಇದು ದುಬಾರಿಯಾದ ವಿಧಾನವಾದರೂ ಇದನ್ನು ಮಾಡಿಸಿದರೆ ಶಾಶ್ವತವಾಗಿ ಬೇಡದ ಕೂದಲನ್ನು ಹೋಗಲಾಡಿಸಬಹುದು.

  ರಮಿತಾ ಶೈಲೇಂದ್ರ ರಾವ್ ಕಾರ್ಕಳ