ಉಡುಪಿ : ಆವರ್ಸೆ ಗ್ರಾಮ ಪಂಚಾಯತ್ನ ದ್ವಿತೀಯ ಹಂತದ ತ್ರೈಮಾಸಿಕ (ಕೆ.ಡಿ.ಪಿ)ಸಭೆಯು ಪಂಚಾಯತ್ ಅಧ್ಯಕ್ಷ ಹೆಚ್ ಪ್ರಮೋದ್ ಹೆಗ್ಡೆ ಅಧ್ಯಕ್ಷತೆಯಲ್ಲಿ, ಆವರ್ಸೆ ಗ್ರಾ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಅಧ್ಯಕ್ಷರು ಆಗಮಿಸಿರುವ ಎಲ್ಲಾ ಇಲಾಖೆಗಳು ಸಾಧಿಸಿರುವ ಗುರಿ ಮತ್ತು ಸಾಧನೆಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಕೃಷಿ ಇಲಾಖೆಯಿಂದ ಕೃಷಿ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಗ್ರಂಥಾಲಯ ಇಲಾಖೆಯಿಂದ ಮೇಲ್ವಿಚಾರಕಿ ಸನಾ, ಸಿಂ.ರೈ.ಸೇ.ಸ.ಸಂಘ ಆವರ್ಸೆ ಶಾಖಾಧಿಕಾರಿ ಶರತ್ ಶೆಟ್ಟಿ, ಶಿಕ್ಣಣ ಇಲಾಖೆಯಿಂದ ಸಹಶಿಕ್ಷಕಿ ಶಾಮಿಲಿ, ಶಿಶು ಅಭಿವೃಧ್ಧಿ ಇಲಾಖೆಯಿಂದ ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ ಆಚಾರ್, ಬ್ರಹ್ಮಾವರ ಶಿಶು ಅಭಿವೃಧ್ಧಿ ಯೋಜನೆ ತರಬೇತಿ ಮೇಲ್ವಿಚಾರಕಿ ಸಾಕು, ಆವರ್ಸೆ ಆ.ಹಾ.ಉ.ಸ.ಸಂಘ ಹಾಲು ಪರಿವೀಕ್ಷಕ ಸುಧಾಕರ ಮರಕಾಲ, ಹಿಲಿಯಾಣ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್, ಆವರ್ಸೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಹೆಚ್ ಆರ್, ಮೆಸ್ಕಾಂ ಮೇಲ್ವಿಚಾರಕ ಉಮೇಶ ಬಿ, ಆವರ್ಸೆ ಪ್ರಾ.ಆ.ಕೇಂದ್ರದ ಆರೋಗ್ಯ ಸಹಾಯಕಿ ಪ್ರತಿಮಾ, ಆವರ್ಸೆ ಪಶು ಚಿಕಿತ್ಸಾಲಯದ ಪರಿವೀಕ್ಷಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಪಿಡಿಓ ಸ್ವಾಗತಿಸಿದರು.